ಅರಣ್ಯವಾಸಿಗಳಿಂದ ೨೬೦೨ ಏಕರೆ ಅರಣ್ಯಭೂಮಿ ವಶ;
ಜಿಲ್ಲಾವಾರು ವಿವರ ಪ್ರಕಟಿಸಲು ಇಲಾಖೆಗೆ ರವೀಂದ್ರ ನಾಯ್ಕ ಆಗ್ರಹ.
ಶಿರಸಿ : ರಾಜ್ಯಾದ್ಯಂತ ಅರಣ್ಯವಾಸಿಗಳಿಂದ ಅನಾಧಿಕೃತ ಒತ್ತುವರಿ ಎಂದು ಪರಿಗಣಿಸಲ್ಪಟ್ಟ ೨೬೦೨.೩೦ ಎಕರೆ ಅರಣ್ಯ ಭೂಮಿಯನ್ನು ೨೦೨೩-೨೪ ರ ವರ್ಷದಲ್ಲಿ ಅರಣ್ಯ ಇಲಾಖೆಯು ಅರಣ್ಯವಾಸಿಗಳಿಂದ ಮತ್ತು ಇತರ ಮೂಲದಿಂದ ಒಕ್ಕಲೇಬ್ಬಿಸಿ ವಶಪಡಿಸಿಕೊಂಡಿದೆ ಎಂದು ಇಲಾಖೆಯು ಘೋಷಿಸಿದೆ. ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗರರ ವೇದಿಕೆಯ ಅದ್ಯಕ್ಷ ರವೀಂದ್ರ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಣ್ಯ ಒತ್ತುವರಿ ಒಕ್ಕಲೆಭ್ಭಿಸುವ ಕಾನುನೂ ಪ್ರಕ್ರಿಯೆಯನ್ನು ಅಳವಡಿಸಿ ಅರಣ್ಯ ಒತ್ತುವರಿ ಪ್ರದೇಶವನ್ನು ವಶಪಡಿಸಲಾಗಿದೆ. ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಅರ್ಜಿಸಲ್ಲಿಸಿದಂತ ಅರಣ್ಯವಾಸಿಗಳನ್ನು ಒಕ್ಕಲೇಬ್ಬಿಸಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ. ೩ ಏಕರೆ ಕ್ಕಿಂತ ಚಿಕ್ಕ ಅರಣ್ಯಭೂಮಿ ಹಿಡುವಳಿದಾರರನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ವಳಪಡಿಸುವುದಿಲ್ಲ ಅಂತ ರಾಜ್ಯ ಸರಕಾರ ಪ್ರಕಟಿಸಿದ್ದಾಗಲೂ ಅರಣ್ಯ ಇಲಾಖೆ ದೊಡ್ಡ ಪ್ರಮಾಣದಲ್ಲಿ ಒಕ್ಕಲೆಬ್ಬಿಸಿದೆ ಎಂದು ಘೋಷಿಸಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಅವರು ಪ್ರಕಟಣೆಯನ್ನು ತಿಳಿಸಿದ್ದಾರೆ.ಅಲ್ಲದೇ, ಜಿಲ್ಲಾವಾರು ಅರಣ್ಯವಾಸಿಗಳಿಂದ ವಶಪಡಿಸಿಕೊಂಡ ಪ್ರದೇಶ ವಿವರ ಪ್ರಕಟಿಸಲು ಅರಣ್ಯ ಇಲಾಖೆಗೆ ಅವರು ಆಗ್ರಹಿಸಿದ್ದಾರೆ.
ಉತ್ತರ ಕನ್ನಡದಲ್ಲಿ ಒಕ್ಕಲೆಬ್ಬಿಸುವಿಕೆ ?
ರಾಜ್ಯದಲ್ಲಿ ಹಿಂದಿನ ವಾರ್ಷಿಕ ವರ್ಷದಲ್ಲಿ ೨೬೦೨ ಎಕರೆ ಅರಣ್ಯ ಪ್ರದೇಶವನ್ನು ಅರಣ್ಯವಾಸಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಎಂದು ಘೋಷಿಸಲ್ಪಟ್ಟ ಇಲಾಖೆಯ ಪ್ರಕಟಿತ ಪ್ರದೇಶದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳಿಂದ ವಶಪಡಿಸಿಕೊಂಡ ಅರಣ್ಯ ಪ್ರದೇಶವನ್ನು ಸೇರಿಸಲ್ಪಟ್ಟಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.