*ಅಂಕೋಲಾದಲ್ಲಿ ಭೂ ಮಾಫಿಯಾಗಳ ಅಟ್ಟಹಾಸ… ಹದ್ದು ಬಸ್ತು ಮಾಡಿಕೊಡುವ ನೆಪದಲ್ಲಿ 1 ಎಕರೆ 24 ಗುಂಟೆಯನ್ನು ಕಬಳಿಸಿದ ವಂಚಕರು…. ನ್ಯಾಯಕ್ಕಾಗಿ ಅಂಕೋಲಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಕುಟುಂಬ- ನ್ಯಾಯ ಕೊಡಿಸುವರೇ ಪೊಲೀಸರು* .
ಅಂಕೋಲಾ :ತಾಲೂಕಿನ.ಬಾಸಗೋಡ ಹೋಬಳಿಯ. ಬಾಳೆಗುಳಿ ಗ್ರಾಮದಲ್ಲಿ 1 ಎಕರೆ 24 ಗುಂಟೆಯ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಜಮೀನನ್ನು ಹದ್ದುಬಸ್ತು ಸರ್ವೆ ಮಾಡಿಕೊಡುತ್ತೇವೆ ಎಂದು ಹೇಳಿ ಉಪ ನೊಂದಾವಣಿ ಕಚೇರಿಗೆ ಕರೆತಂದು ಮಾಲೀಕರಿಗೆ ಸಂದೇಹಬಾರದಂತೆ ಚಾಣಾಕ್ಷತನದಿಂದ ಕ್ರಯ ಮಾಡಿಸಿಕೊಂಡು ವಂಚನೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ ..
ಮೋಸ ಹೋಗುವವರು ಎಲ್ಲಿಯವರೆಗೂ ಇರುತ್ತಾರೆ ಮೋಸ ಮಾಡುವವರು ಇರುತ್ತಾರೆ .
ಅಂತಹ ಪ್ರಕರಣಕ್ಕೆ ಸಾಕ್ಷಿಯಾಗಿದೆ ಅಂಕೋಲ ತಾಲೂಕಿನ ಅಂಬಾರಕೊಡ್ಲ ನಿವಾಸಿ ನಿಂಗಿ ಅಮಾವಾಸ್ಯೆ ಗೌಡ ಕುಟುಂಬಕ್ಕೆ ಅನ್ಯಾಯವಾದ ಸತ್ಯ ಘಟನೆ..
*ಏನಿದು ಪ್ರಕರಣ* = ಅಂಕೋಲಾ ತಾಲೂಕಿನ ಬಾಳೆಗುಳಿ ಗ್ರಾಮದ ಸರ್ವೇ ನಂಬರ್ 20ಹಿಸ್ಸಾ 3. ಕ್ಷೇತ್ರ 1 ಎಕರೆ 24 ಗುಂಟೆಯ ಜಾಗಕ್ಕಾಗಿ ನಿಂಗಿ ಅಮವಾಸ್ಯ ಗೌಡ ನ್ಯಾಯಾಲಯದ ಮೆಟ್ಟಿಲೇರಿ ನಂತರ ಸದರಿ ಪ್ರಕರಣ ಫೈನಲ್ ಡಿಕ್ರಿಯಾಗಿ ನಿಂಗಿ ಗೌಡ ಹಾಗೂ ನಿಂಗಿಯ ಕುಟುಂಬದ ವಾರಸುದಾರರ ಪರವಾಗಿ ಆದೇಶವಾಗಿತ್ತು. ವಾದಿಯ ಪರ ಶಾಂತ ಹೆಗಡೆ ಪರ ವಕೀಲರು ವಾದಿಸಿದ್ದರು.
ನಿಂಗಿ ಕುಟುಂಬಕ್ಕೆ ಪರಿಚಯಿತನಾಗಿದ್ದ ವೆಂಕಟರಮಣ ಗೌಡ ಎಂಬಾತ ಕಾಲ ಕಾಲಕ್ಕೆ ದಾಖಲೆಗಳನ್ನು ತೆಗೆಸಿಕೊಡಲು ಮತ್ತು ಎಫ್ ಡಿಪಿ ಪ್ರಕರಣದಲ್ಲಿ ಸರ್ವೆ ಮೋಜನೀ ಮಾಡಲು 11 ಈ ನಕ್ಷೆ ಮೊದಲಾದ ಕೆಲಸಗಳಿಗೆ ಸಹಾಯ ಮಾಡುತ್ತಿದ್ದನು.. ಅನಕ್ಷರಸ್ಥಳಾಗಿದ್ದ ನಿಂಗಿ ಗೌಡ ರವರ ಅಸಹಾಯಕತೆ ಮತ್ತು ಬಡತನ ನೋಡಿ ಸಹಾಯ ಮಾಡುತ್ತಿದ್ದೇನೆ.ನಿನ್ನ ಗಂಡ ನನಗೆ ತುಂಬಾ ಬೇಕಾದವನಾಗಿದ್ದ ಎಂದು ನಂಬಿಸಿದ್ದನು .. ಹಾಗೆಯೇ ಕೋರ್ಟ್ ಆದೇಶದಂತೆ ಪಹಣಿ ಪತ್ರಿಕೆ ನಿಂಗಿ ಗೌಡ ಹಾಗೂ ವಾರಸುದಾರರ ಹೆಸರಿನಲ್ಲಿ ಆಗುತ್ತಿದ್ದಂತೆ . ಪಹಣಿ ಪತ್ರಿಕೆ ಇರುವ ಜಾಗವನ್ನು ಸರ್ವೆ ಮೋಜಿನಿ ಮಾಡಿಸಿ ಕೊಡುತ್ತೇನೆ ಎಂದು ನಂಬಿಸಿ ನಿಂಗಿ ಗೌಡ ಹಾಗೂ ವಾರಸುದಾರರಿಗೆ ಹಳೆ ಮುನ್ಸಿಸಿಪಾಲಿಟಿ ಆಫೀಸಿಗೆ ಬರಬೇಕೆಂದು ಹೇಳಿ ಕಳೆದ ತಾರೀಕು 11/10/2023 ರಂದು ಹಳೆ ಮುನ್ಸಿಪಾಲಿಟಿ ಕಚೇರಿಯಲ್ಲಿನ ಉಪ ನೊಂದಣಿ ಕಚೇರಿಗೆ ಕರೆದುಕೊಂಡು ಹೋದನು. ಕಚೇರಿಯಲ್ಲಿ ಹಲವಾರು ಕಡೆ ಸಹಿ ಮಾಡಿಸಿಕೊಂಡು ನಿಮ್ಮ ಪಾಲಿನ ಜಮೀನು ಸರ್ವೆ ಮೋಜನಿ ಮಾಡಿ ಬೇರೆ ಬೇರೆ ಮಾಡಿಕೊಡುತ್ತೇನೆ ಎಂದು ಹೇಳಿದನು . ಸರ್ವೆ ಮೋಜನಿಗೆ ರೆಕಾರ್ಡ್ ನಲ್ಲಿ ಹೆಸರಿರುವ ಎಲ್ಲಾ ಸದಸ್ಯರ ಸಹಿ ಬೇಕಾಗುತ್ತದೆ ಎಂದು ನಂಬಿ ತಮ್ಮ ಜಾಗ ಬೇರೆಯವರಿಗೆ ಮಾರಾಟ ಆಗುತ್ತಿದೆ ಎಂಬ ಮೋಸದ ಅರಿವಿಲ್ಲದೆ ಸಹಿ ಮಾಡಿಯೇ ಬಿಟ್ಟರು .
ಮುಂದಿನ ದಿನಗಳಲ್ಲಿ ಸರ್ವೆ ಬಗ್ಗೆ ಯಾವುದೇ ವಿಷಯ ಕೇಳಿದರು ಹಾರೈಕೆ ಉತ್ತರ ನೀಡುತ್ತಿದ್ದ ವೆಂಕಟರಮಣಗೌಡ ತಲೆಮರೆಸಿಕೊಂಡು ತಿರುಗಾಡುತ್ತಿದ್ದನು. ವೆಂಕಟರಮಣ ಬಚ್ಚೇ ಗೌಡನು ವಿಚಿತ್ರವಾಗಿ ವರ್ತನೆ ಮಾಡುವುದನ್ನು ಗಮನಿಸಿ ಅನುಮಾನ ಗೊಂಡು ಪಹಣಿ ಪತ್ರಿಕೆ ಪರಿಸಿಲಿಸಿದಾಗ ವೆಂಕಟರಮಣ ಗೌಡ ಮೋಸದಿಂದ 1 ಎಕರೆ 24 ಗುಂಟೆ ಜಾಗವನ್ನು ಕ್ರಯದಸ್ತು ಮಾಡಿಕೊಂಡಿದ್ದಾನೆಂದು ತಡವಾಗಿ ಫೆಬ್ರುವರಿ ತಿಂಗಳು 2024ರಲ್ಲಿ ನಿಂಗಿ ಗೌಡ ಕುಟುಂಬಕ್ಕೆ ತಿಳಿದು ಬಂತು. ಕ್ರಯದಸ್ತಿ ನಲ್ಲಿ ಬರೆದಂತಹ ಯಾವುದೇ ಹಣವನ್ನು ಆಗಲಿ ಚೆಕ್ಕುಗಳನ್ನಾಗಲಿ ನೀಡದೆ. ತಮ್ಮ ಯಾವುದೇ ಬ್ಯಾಂಕ್ ಖಾತೆಗೂ ಹಣ ಜಮೆ ಮಾಡದೇ ತಾವು ಮೋಸ ಹೋಗಿದ್ದೇವೆ ಎಂದು ತಿಳಿದು ನಿಂಗಿ ಗೌಡ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.
ತಮಗಾದ ಅನ್ಯಾಯದ ಬಗ್ಗೆ ನಿಂಗಿ ಗೌಡರು ತಮ್ಮ ವಕೀಲರಾದ ಶಾಂತ ಹೆಗಡೆ ಅವರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ… ವಕೀಲರು ತಮ್ಮ ಕಕ್ಷಿದಾರ ನಿಂಗಿ ಗೌಡ ರವರಿಗೆ ಆದ ಅನ್ಯಾಯದ ಬಗ್ಗೆ ವೆಂಕಟರಮಣ ಗೌಡರನ್ನು ಸಂಪರ್ಕಿಸಲು ಪ್ರಯತ್ನಪಟ್ಟಿದ್ದಾರೆ. ವೆಂಕಟರಮಣ ಗೌಡ ಮೋಸದಿಂದ ಪಡೆದುಕೊಂಡ ಜಮೀನನ್ನು ಪುನಹ ನಿಂಗಿ ಗೌಡರಿಗೆ ಹಿಂತಿರುಗಿಸುತ್ತೇನೆ ಎಂದು ಹೇಳಿ. ಆ ಜಮೀನನ್ನು ತರಾತುರಿಯಲ್ಲಿ ವಿಕಾಸ ನಾಯಕ ಹಿಚ್ಕಡ್. ಇವರಿಗೆ ಮಾರಾಟ ಮಾಡಿದ್ದಾನೆ ಮತ್ತದೇ ತನ್ನ ಕತರ್ನಾಕ್ ಬುದ್ಧಿಯನ್ನು ತೋರಿಸಿ ಸಪಲನಾಗಿದ್ದಾನೆ.
ನ್ಯಾಯ ಕೊಡಿಸುವವರೇ ಅಂಕೋಲಾ ಪೊಲೀಸರು.= ನಿಂಗಿ ಕುಟುಂಬ ತಮಗಾದ ಅನ್ಯಾಯದ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಗೆ ಲಿಖಿತವಾಗಿ ದೂರನ್ನು ನೀಡಿದ್ದಾರೆ .
ಸದರಿ ದೂರಿನಲ್ಲಿ 1) ವೆಂಕಟರಮಣ ಬೆಚ್ಚು ಗೌಡ.. ಅಕ್ರಮವಾಗಿ ಕ್ರಯದಸ್ತು ಬರೆಸಿಕೊಂಡವನು.
2) ಮಾದೇವ ಗೌಡ . ಅಗಸೂರು
ವೆಂಕಟರಮಣನಿಗೆ ಕಾಗದ ಪತ್ರಗಳನ್ನು ತಯಾರಿಸಿ ಕೊಟ್ಟವನು.. ಏಜೆಂಟ್.
3) ರೂಪೇಶ ರಮೇಶ್ ನಾಯ್ಕ
ನದಿಬಾಗ್.( ಏಜೆಂಟ್ )
ವೆಂಕಟರಮಣ ತನ್ನ ಹೆಸರಿನಲ್ಲಿ ಮಾಡಿಕೊಂಡಿರುವ ಕ್ರಯದಸ್ತಿ ನಲ್ಲಿ ಹಣ & ಚೆಕ್ಕು ಗಳನ್ನು ಕೊಡದೆ ಇದ್ದರೂ ಕೊಟ್ಟಿದ್ದಾನೆಂದು ಸಾಕ್ಷಿಗೆ ಸಹಿ ಹಾಕಿದವನು.
4) ವಿಕಾಸ ನಾಯಕ. ಹಿಚ್ಕಡ್.
ವೆಂಕಟರಮಣ ಗೌಡ ರಿಂದ್ ಜಮೀನನ್ನು ಕ್ರಯಕ್ಕೆ ಪಡೆದುಕೊಂಡವನು.
ಈಗಾಗಲೇ ಪೊಲೀಸರು ದೂರನ್ನು ದಾಖಲಿಸಿ ನಿಂಗಿ ಗೌಡ ಕುಟುಂಬಕ್ಕೆ ಸ್ವೀಕೃತಿಯನ್ನು ನೀಡಿದ್ದಾರೆ.. ಮೇಲಿನ ಕೆಲವು ಆರೋಪಿಗಳನ್ನು ಠಾಣೆಗೆ ಕರೆದು ವಿಚಾರಣೆಯನ್ನು ಮಾಡಿದ್ದಾರೆಂದು ತಿಳಿದು ಬಂದಿದೆ.
ಇದು ಸಿವಿಲ್ ಪ್ರಕರಣ ಕಂಡುಬಂದರೂ ಕೂಡ ಹಣದ ವಿಷಯದಲ್ಲಿ ಕ್ರಯದಸ್ತಿ ನಲ್ಲಿ ಬರೆದಂತಹ ಯಾವುದೇ ಹಣವನ್ನು ನೀಡದೆ. ಬ್ಯಾಂಕ್ ಖಾತೆಗೂ ಹಣವನ್ನು ಪಾವತಿಸದೆ ಮೋಸ ವಂಚನೆ ಮಾಡಿರುವ ಕಾರಣ ವೆಂಕಟರಮಣ ಗೌಡ ಹಾಗೂ ಇವನಿಗೆ ಸಹಕರಿಸಿದ ಮೇಲಿನ ಆರೋಪಿಗಳ ಮೇಲೆ ಸೂಕ್ತ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬೇಕು.. ಹಾಗೂ ತನಗಾದ ವಂಚನೆ ಇನ್ಯಾರಿಗೂ ಆಗಬಾರದು ಎಂಬುದು ನಿಂಗಿ ಗೌಡ ಕುಟುಂಬದ ಆಗ್ರಹವಾಗಿದೆ . ಅಂಕೋಲಾ ಪೊಲೀಸ್ ಠಾಣೆಯ ದಕ್ಷ ಅಧಿಕಾರಿ ಸಿಪಿಐ ಶ್ರೀಕಾಂತ ಸರ್ ಹಾಗು ಠಾಣೆಯ ದಕ್ಷ ಪಿಎಸ್ಐ ಗಳು ನಿಂಗಿ ಗೌಡ ಕುಟುಂಬಕ್ಕೆ ವಂಚನೆ ಮಾಡಿದ ಆರೋಪಿಗಳ ಮೇಲೆ ಸೂಕ್ತ ಕ್ರಿಮಿನಲ್ ಪ್ರಕರಣ ದಾಖಲಿಸಿ ಅಮಾಯಕ ಬಡ ಕುಟುಂಬಕ್ಕೆ ನ್ಯಾಯ ಕೊಡಿಸುವರೋ ಎಂದು ಕಾದು ನೋಡಬೇಕಾಗಿದೆ.