ಜಿಲ್ಲಾದಂತ ದಶ ಲಕ್ಷ ಗಿಡ ನೆಡುವ ಅಭಿಯಾನ:
ಪ್ರತಿ ಅರಣ್ಯವಾಸಿ ಕುಂಟುಬದಿAದ ೧೦ ಗಿಡ ನೆಡಲು ನಿರ್ಧಾರ- ರವೀಂದ್ರ ನಾಯ್ಕ
ಶಿರಸಿ: ಅರಣ್ಯ ಅಭಿವೃದ್ಧಿ ಮತ್ತು ಪರಿಸರ ಜಾಗೃತೆ ಹೆಚ್ಚಿಸುವ ಉದ್ದೇಶದಿಂದ ಅರಣ್ಯ ಭೂಮಿ ಹಕ್ಕು ಹೋರಾಟಕ್ಕೆ ೩೩ ವರ್ಷವಾಗಿರುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳಿಂದ ‘೩೩ ವರ್ಷ ಹೋರಾಟ- ದಶ ಲಕ್ಷ ಗಿಡ’’ನೆಡುವ ಅಭಿಯಾನದ ಮೂಲಕ ವನಮಹೋತ್ಸವವ ಜಿಲ್ಲಾದ್ಯಂತ ಆಚರಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಅವರು ಇಂದು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ‘೩೩ ವರ್ಷ ಹೋರಾಟ- ದಶ ಲಕ್ಷ ಗಿq’À ಅಭಿಯಾನದ’ ಲಾಂಛನ ಬಿಡುಗಡೆ ಮಾಡುತ್ತಾ ಮಾತನಾಡಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಭೀವೃದ್ಧಿ ಕಾರ್ಯ, ಬೆಂಕಿ, ಜಲವಿದ್ಯುತ್ ಯೋಜನೆ, ಸಾರಿಗೆ, ಅರಣ್ಯ ಇಲಾಖೆಯ ಕಾಮಗಾರಿ ಮುಂತಾದ ಉದ್ದೇಶದಿಂದ ಜಿಲ್ಲೆಯಲ್ಲಿನ ಅರಣ್ಯ ಸಾಂಧ್ರತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು ವಿಷಾದಕರ. ಈ ಹಿನ್ನೆಲೆಯಲ್ಲಿ ಅರಣ್ಯ ಭೂಮಿಯ ಮೇಲೆ ಅವಲಂಭಿತ ಅರಣ್ಯವಾಸಿಗಳು ಜಿಲ್ಲಾದ್ಯಂತ ಇಲಾಖೆಯ ಗಿಡ ನೆಟ್ಟು, ಪರಿಸರ ಜಾಗೃತೆ ಮೂಡಿಸಲಾಗುವುದೆಂದು ಅವರು ಹೇಳಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಭೌಗೋಳಿಕವಾಗಿ ೧೦,೫೭೧ ಚದರ್.ಕೀ.ಮೀ ಪ್ರದೇಶ ಹೊಂದಿದ್ದು ಇರುತ್ತದೆ. ಅವುಗಳಲ್ಲಿ ೮,೫೦೦ ಚದರ್.ಕೀ.ಮೀ ಅರಣ್ಯ ಪ್ರದೇಶವಾಗಿದೆ. ಭೌಗೋಳಿಕವಾಗಿ ಜಿಲ್ಲೆಯ ಜನಸಂಖ್ಯೆಯ ಸಾಂಧ್ರತೆಯ ಪ್ರಮಾಣ ಪ್ರತಿ ಸ್ಕೆö್ಯÃರ್ ಕೀ. ಮೀ ಗೆ ೨೦೨ ಜನ ಇದ್ದರೇ, ಅರಣ್ಯ ಸಾಂದ್ರತೆಯ ಪ್ರದೇಶವು ಜನಸಂಖ್ಯೆಯ ಸಾಂಧ್ರತೆಗಿAತ ೧೦ ಪಟ್ಟು ಹೆಚ್ಚಾಗಿ ಇದ್ದರೂ ವಾಸ್ತವಿಕವಾಗಿ ಗಿಡ, ಮರ ಪ್ರಮಾಣ ಕಡಿಮೆ ಇರುವುದು ಉಲ್ಲೇಖನಾರ್ಹ.
ಈ ಸಂದರ್ಭದಲ್ಲಿ ಯಲ್ಲಾಪುರ ತಾಲೂಕ ಅಧ್ಯಕ್ಷ ಭಿಮ್ಸಿ ವಾಲ್ಮೀಕಿ, ಮುಂಡಗೋಡ ಅಧ್ಯಕ್ಷ ಶಿವಾನಂದ ಜೋಗಿ, ಜಿಲ್ಲಾ ಸಂಚಾಲಕರಾದ ಇಬ್ರಾಹಿಂ ಗೌಡಳ್ಳಿ, ರಾಜು ನರೇಬೈಲ್ ಹಾಗೂ ಪ್ರಮುಖರಾದ ದುಗ್ಗು ಮರಾಠಿ, ನೂರ್ ಅಹಮ್ಮದ್, ಗಣೇಶ ಧಾಕು ಮರಾಠಿ ಉಪಸ್ಥಿತರಿದ್ದರು.
ಪ್ರತಿ ಕುಟುಂಬದಿAದ ೧೦ ಗಿಡ:
ಅಭಿಯಾನದಲ್ಲಿ ಪ್ರತಿ ಅರಣ್ಯವಾಸಿಗಳ ಕುಟುಂಬವು ಕನಿಷ್ಠ ೧೦ ಧೀರ್ಘಾಯುಷ್ಯ ಗಿಡ ನೆಡುವಂತೆ ಅಧ್ಯಕ್ಷ ರವೀಂದ್ರ ನಾಯ್ಕ ಕರೆ ನೀಡಿದರು.