ಹಾಸನ ಮೂಲದ ಚನ್ನರಾಯ ಪಟ್ಟಣದ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ 18 ಲಕ್ಷ ರೂಪಾಯಿ ಪಂಗನಾಮ ಹಾಕಿದ ಮುಂಡಗೋಡು ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಗಿರೀಶ್.ಎಸ್.ಎಮ್
ಮುಂಡಗೋಡ-ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ, ಆಕೆಯಿಂದ 18 ಲಕ್ಷ ರೂಪಾಯಿ ಹಣ ಪಡೆದು ವಂಚನೆ ಮಾಡಿರುವ ಆರೋಪವೊಂದು ಪೊಲೀಸ್ ಕಾನ್ಸ್ಟೇಬಲ್ ವಿರುದ್ದ ಕೇಳಿಬಂದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದಿದೆ.
ಮುಂಡಗೋಡು ಠಾಣೆಯ ಕಾನ್ಸ್ಟೇಬಲ್ ಗಿರೀಶ್.ಎಸ್.ಎಮ್ ಎಂಬುವವರೇ ವಂಚನೆ ಮಾಡಿದ ಆರೋಪಿಯಾಗಿದ್ದು, ಹಾಸನ ಮೂಲದ ಚನ್ನರಾಯ ಪಟ್ಟಣ ಮೂಲದ ಸುಚಿತ್ರ ವಂಚನೆಗೊಳಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಘಟನೆ ಕುರಿತು ದೂರು ನೀಡಿದ್ದಾರೆ. ಈ ಹಿಂದೆ ಸುಚಿತ್ರಾ ರವರು ಮದುವೆಯಾಗುವುದಾಗಿ ನಂಬಿಸಿ, 18 ಲಕ್ಷ ವಂಚಿಸಿರುವ ಕುರಿತು ಎಸ್.ಪಿ ವಿಷ್ಣುವರ್ಧನ್ ರವರಿಗೆ ದೂರು ನೀಡಿದ್ದರು.
ದೂರು ಹಿನ್ನೆಲೆಯಲ್ಲಿ ಆತನನ್ನು ಕರೆಯಿಸಿ ತನಿಖೆ ಕೈಗೊಂಡಾಗ ಹಣ ಪಡೆದಿದ್ದು ಹಣ ಮರಳಿಸುತ್ತೇನೆ ಎಂದು ಒಪ್ಪಿಕೊಂಡಿದ್ದ, ಆದರೆ ಮದುವೆಯಾಗಲು ನಿರಾಕರಿಸಿದ್ದ. ಬಳಿಕ ಹಣ ಮರಳಿಸದೇ ಇರುವುದರಿಂದ ನಿನ್ನೆ ರಾತ್ರಿ ಮುಂಡಗೋಡು ಠಾಣೆಗೆ ತೆರಳಿದ ಯುವತಿ ವಂಚನೆ ದೂರು ನೀಡಿದ್ದಾರೆ. ಮುಂಡಗೋಡು ಪೊಲೀಸರು ಕಲಂ 420 ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ತನಿಖೆ ಕೈಗೊಂಡಿದ್ದಾರೆ.