ಭಟ್ಕಳ ತಾಲೂಕ ಪಂಚಾಯತ ನ ಮಾಜಿ ಅಧ್ಯಕ್ಷರಾದ ಶ್ರೀ ಕೆ.ಎನ್ ನಾಯ್ಕ್ ಚಿತ್ರಾಪುರ ಅವರ ನಿವಾಸಕ್ಕೆ ತೆರಳಿ ಯೋಗಕ್ಷೇಮ ವಿಚಾರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ
ಭಟ್ಕಳ- ಶನಿವಾರ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಭಟ್ಕಳ ತಾಲ್ಲೂಕಿನ ಶಿರಾಲಿ ಗ್ರಾಮದ ಅವರ ತಂದೆ ಬಂಗಾರಪ್ಪಾಜ್ಜಿಯವರ ಅನುಯಾಯಿಗಳು, ತಾಲೂಕ ಪಂಚಾಯತ ನ ಮಾಜಿ ಅಧ್ಯಕ್ಷ ರು ಆದ ಶ್ರೀ ಕೆ.ಎನ್ ನಾಯ್ಕ್ ಚಿತ್ರಾಪುರ ಅವರ ನಿವಾಸಕ್ಕೆ ತೆರಳಿ ಯೋಗಕ್ಷೇಮ, ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಶಿರಸಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಭೀಮಣ್ಣ ನಾಯ್ಕ್ , ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು..