ಒಂದು ದಶಕದಿಂದ ಭಟ್ಕಳದ ಲ್ಲಿ ಬೀಡು ಬಿಟ್ಟಿರುವ ಸರ್ಕಾರಿ ನೌಕರರನ್ನು ವರ್ಗಾಯಿಸಿ ಎಂದು ಆಗ್ರಹಿಸಿ ಭಟ್ಕಳದ ಹಳೆ ತಹಸೀಲ್ದಾರ್ ಕಚೇರಿ ಎದುರು ರಾಜ್ಯ ಮಾಹಿತಿ ಹಕ್ಕು ಕಾಯ್ದೆ ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಅನಿರ್ದಿಷ್ಟಾವದಿ ಅಹೋರಾತ್ರಿ ಧರಣಿ ಆರಂಭ
ಭಟ್ಕಳ: ಒಂದು ದಶಕದಿಂದ ಭಟ್ಕಳದ ಲ್ಲಿ ಬೀಡು ಬಿಟ್ಟಿರುವ ಸರ್ಕಾರಿ ನೌಕರರನ್ನು ವರ್ಗಾಯಿಸಿ ಎಂದು ಆಗ್ರಹಿಸಿ ಇಂದು ಭಟ್ಕಳದ ಹಳೆ ತಹಸೀಲ್ದಾರ್ ಕಚೇರಿ ಎದುರು ರಾಜ್ಯ ಮಾಹಿತಿ ಹಕ್ಕು ಕಾಯ್ದೆ ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಜಿಲ್ಲಾ ಅಧ್ಯಕ್ಷ ಶಂಕರ ನಾಯ್ಕ ನೇತೃತ್ವದಲ್ಲಿ ಅಹೋರಾತ್ರಿ ಅನಿರ್ದಿಷ್ಟಾವದಿ ಧರಣಿ ಆರಂಭಗೊಂಡಿದೆ. ಈ ವೇಳೆ ಮಾತನಾಡಿದ ಶಂಕರ್ ನಾಯ್ಕ ಭಟ್ಕಳದ ಸಹಾಯಕ ಕಮಿಷನರ್ ಕಚೇರಿ ಹಾಗೂತಹಶೀಲ್ದಾರ ಕಚೇರಿಯಲ್ಲಿನಿಯಮಬಾಹೀರವಾಗಿ ಹಲವು ವರ್ಷದಿಂದ ಸರ್ಕಾರಿ ನೌಕರರು ಬೀಡುಬಿಟ್ಟಿದ್ದಾರೆ. ಇಂತಹ ನೌಕರರಿಂದ ಆಡಳಿತ ಹದಗೆಟ್ಟಿದ್ದು ಭಟ್ಕಳದಲ್ಲಿ ಭ್ರಷ್ಟಾಚಾರ ಜಾಸ್ತಿ ಆಗಿದೆ ಎಂದು ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತ ರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ನಾಯ್ಕ ವಿವರಿಸಿದರು. ದಶಕಕ್ಕೂ ಹೆಚ್ಚು ವರ್ಷ ಗಳಿಂದ ಇರುವ ಸಿಬ್ಬಂದಿ ವರ್ಗಾಯಿಸಿ ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಧರಣಿಯಲ್ಲಿ ಸಂಘಟನೆ ಯ ಮಾಜಿ ಜಿಲ್ಲಾಧ್ಯಕ್ಷ ರಾಜು ನಾಯ್ಕ್, ತಾಲೂಕ ಅದ್ಯಕ್ಷ ನಾಗೇಂದ್ರ ನಾಯ್ಕ್, ಕಾರ್ಯದರ್ಶಿ ನಾಗೇಶ ನಾಯ್ಕ್ ಹೊನ್ನಿಗದ್ದೆ, ಪದಾಧಿಕಾರಿಗಳಾದ ಸುಬ್ರಾಯ ದೇವಾಡಿಗ, ಇತರ ಜಿಲ್ಲೆಯ ಪ್ರಮುಖರು, ಕಾರ್ಯಕರ್ತರು ಮುಂತಾದವರಿದ್ದರು.