ಮುಂಡಗೋಡ: ಲಂಚ ಪಡೆಯುವ ವೇಳೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದ ಗ್ರಾಮ ಲೆಕ್ಕಿಗ ಗಿರೀಶ ರಣದೇವ’ಗೆ ನ 21ರಂದು ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ. ಹೀಗಾಗಿ ಗಿರೀಶ ರಣದೇವ’ರನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಳಿಯಾಳದ ತತ್ವಣಗಿಯಲ್ಲಿ ಕೆಲಸ ಮಾಡುತ್ತಿರುವಾಗ ಭೀಮರಾವ ಕುರುಬರ ಎಂಬಾತರಿAದ 3 ಸಾವಿರ ರೂ ಲಂಚ ಸ್ವೀಕರಿಸುವ ವೇಳೆ ಗಿರೀಶ್ ಸಿಕ್ಕಿ ಬಿದ್ದಿದ್ದರು. ಅಣ್ಣ-ತಮ್ಮರ ನಡುವೆ ವಿಭಾಗ ಆದ ಭೂಮಿಯನ್ನು ಅವರವರ ಹೆಸರಿಗೆ ಮಾಡಿಕೊಡಲು ಗ್ರಾಮ ಲೆಕ್ಕಿಗ ಲಂಚ ಕೇಳಿದ ಕಾರಣ ಪ್ರಕರಣ ದಾಖಲಾಗಿತ್ತು.
ನ 15ರಂದು ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ದೋಷಿ ಎಂದು ಘೋಷಿಸಿದೆ. ಈ ಹಿನ್ನಲೆ ಪ್ರಸ್ತುತ ಮುಂಡಗೋಡಿನ ಇಂದೂರುದಲ್ಲಿ ಗ್ರಾಮ ಲೆಕ್ಕಿಗನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗಿರೀಶ ರಣದೇವರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.