ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ಕಡಲತೀರದಲ್ಲಿ ಬುಧವಾರ ನಡೆದ ದಾರುಣ ಘಟನೆಯಲ್ಲಿ ಉತ್ತರ ಪ್ರದೇಶ ಮೂಲದ ಇಬ್ಬರು ಯುವಕರು ಅಲೆಗಳ ಅಬ್ಬರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
ಮೃತರನ್ನು ಮಹಮದ್ ಅಪ್ರೋಜ್ ಮತ್ತು ರಿಜ್ವಾನ್ ಸಾಕೀರ ಎಂದು ಗುರುತಿಸಲಾಗಿದೆ. ಇವರು ತಮ್ಮ ಸ್ನೇಹಿತರೊಂದಿಗೆ ಭಟ್ಕಳಕ್ಕೆ ಪ್ರವಾಸಕ್ಕಾಗಿ ಆಗಮಿಸಿದ್ದರು. ಮಧ್ಯಾಹ್ನ ವೇಳೆ ಒಟ್ಟು ಏಳು ಜನ ಸಮುದ್ರ ಸ್ನಾನಕ್ಕೆ ಇಳಿದಾಗ, ಆಕಸ್ಮಿಕವಾಗಿ ಅಲೆಗಳ ತೀವ್ರತೆ ಹೆಚ್ಚಾಗಿ, ಬಲವಾದ ಅಲೆ ಇಬ್ಬರನ್ನು ಒಳಕ್ಕೆ ಎಳೆದೊಯ್ದಿದೆ.
ಘಟನೆಯ ವೇಳೆ ಇನ್ನೊಬ್ಬ ಯುವಕನೂ ಅಲೆಗಳಿಗೆ ಸಿಲುಕಿದ್ದರೂ, ಸ್ಥಳೀಯರಾದ ಸೌದ್ ಗವಾಯಿ ಮತ್ತು ಸಾಜೀಪ್ ತಕ್ಷಣ ಧೈರ್ಯದಿಂದ ಮುಂದಾಗಿ ಅವರನ್ನು ರಕ್ಷಿಸಿದ್ದಾರೆ. ಉಳಿದ ಐದು ಮಂದಿಯನ್ನು ಅಸ್ವಸ್ಥ ಸ್ಥಿತಿಯಲ್ಲಿ ದಡಕ್ಕೆ ತರಲಾಗಿದೆ.ಮಹಮದ್ ಅಪ್ರೋಜ್ ಮತ್ತು ರಿಜ್ವಾನ್ ಸಾಕೀರರನ್ನು ತಕ್ಷಣ ದಡಕ್ಕೆ ತಂದು ಚಿಕಿತ್ಸೆ ನೀಡಲು ಯತ್ನಿಸಿದರೂ, ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.

ಈ ಘಟನೆ ಕಡಲತೀರಗಳಲ್ಲಿ ಸುರಕ್ಷತಾ ಕ್ರಮಗಳ ಅಗತ್ಯತೆ ಹಾಗೂ ಪ್ರವಾಸಿಗರು ಎಚ್ಚರಿಕೆಯಿಂದ ವರ್ತಿಸುವ ಅಗತ್ಯವನ್ನು ಒತ್ತಿ ಹೇಳುತ್ತದೆ.
