ಭಟ್ಕಳ: ಶಿರಾಲಿಯ ಅಳವೆಕೋಡಿಯಲ್ಲಿ ಸಂಭವಿಸಿದ ಜಲದುರಂತದಲ್ಲಿ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಸಂತ್ರಸ್ತರ ನೆರವಿಗೆ Jamaat-e-Islami Hind ನ HRS ತಂಡ ಮುಂದಾಗಿದೆ.ದುರಂತದಲ್ಲಿ ಮೃತಪಟ್ಟವರ ಕುಟುಂಬಗಳ ಬಹುತೇಕರು ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯವರಾಗಿದ್ದು, ದಿನಗೂಲಿ ಆಧಾರಿತ ಜೀವನ ನಡೆಸುತ್ತಿದ್ದರು. ಕುಟುಂಬದ ಆಧಾರಸ್ತಂಭವನ್ನೇ ಕಳೆದುಕೊಂಡ ಕಾರಣ ಅನೇಕ ಮನೆಗಳು ಸಂಕಷ್ಟಕ್ಕೆ ಸಿಲುಕಿವೆ.ಈ ಹಿನ್ನೆಲೆಯಲ್ಲಿ HRS ತಂಡವು ಸಂತ್ರಸ್ತ ಕುಟುಂಬಗಳಿಗೆ ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಅಗತ್ಯ ದಿನಸಿ ಸಾಮಗ್ರಿಗಳ ರೇಷನ್ ಕಿಟ್‌ಗಳನ್ನು ವಿತರಿಸಿ ಮಾನವೀಯತೆ ಮೆರೆದಿದೆ.

ಶಿರಾಲಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಗಣಪತಿ ನಾಯ್ಕ್ ಮಾತನಾಡಿ, “ಸಂತ್ರಸ್ತರನ್ನು ಹುಡುಕಿಕೊಂಡು ಬಂದು ಸಹಾಯ ಮಾಡಿರುವುದು ಶ್ಲಾಘನೀಯ ಕೆಲಸ. ಇಂತಹ ನೆರವು ಇನ್ನಷ್ಟು ಕುಟುಂಬಗಳಿಗೆ ತಲುಪಲಿ,” ಎಂದು ಹೇಳಿದರು.

ಸಂತ್ರಸ್ತ ಕುಟುಂಬದ ಮಹಿಳೆಯೊಬ್ಬರು, “ನಮ್ಮ ಸಂಕಷ್ಟದ ಸಮಯದಲ್ಲಿ ಬಂದು ಸಹಾಯ ಮಾಡಿರುವುದು ಧೈರ್ಯ ನೀಡಿದೆ,” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.ಜಾತಿ, ಧರ್ಮ ಮೀರಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗಿರುವ ಈ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

