ಭಟ್ಕಳ: ಭಟ್ಕಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮುಸ್ಲಿಂ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಮತ್ತು ಸಾರ್ವಜನಿಕ ವಿಚಾರಗಳಿಗೆ ಮಾರ್ಗದರ್ಶನ ನೀಡುತ್ತಿರುವ ಪ್ರತಿಷ್ಠಿತ ಸಂಸ್ಥೆಯಾದ ಮಜ್ಲಿಸ್ ಇಸ್ಲಾಹ್ ವ ತಂಝೀಮ್ ಸಂಸ್ಥೆಗೆ ಮುಂದಿನ ಮೂರು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಸಂಸ್ಥೆಯ ಕಚೇರಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಅಧ್ಯಕ್ಷರಾಗಿ ಇನಾಯತುಲ್ಲಾ ಶಾಬಂದ್ರಿ ಅವರನ್ನು ಪುನರಾಯ್ಕೆ ಮಾಡಲಾಗಿದೆ.

ಪ್ರಧಾನ ಕಾರ್ಯದರ್ಶಿಯಾಗಿ ಮೌಲಾನಾ ಅಝೀಝುರಹ್ಮಾನ್ ರುಕ್ನುದ್ದೀನ್ ನದ್ವಿ ಅವರನ್ನು ಆಯ್ಕೆ ಮಾಡಲಾಗಿದೆ.ಇತರ ಪದಾಧಿಕಾರಿಗಳಾಗಿ ಪ್ರಥಮ ಉಪಾಧ್ಯಕ್ಷರಾಗಿ ಪಿಲ್ಲೂರ್ ಮುಹಮ್ಮದ್ ಸಾಧಿಕ್, ದ್ವಿತೀಯ ಉಪಾಧ್ಯಕ್ಷರಾಗಿ ಕಮರ್ ಸಾದಾ ಹಾಗೂ ತೃತೀಯ ಉಪಾಧ್ಯಕ್ಷರಾಗಿ ರುಕ್ನುದ್ದೀನ್ ಅಬ್ದುಸ್ಸಲಾಂ ಆಯ್ಕೆಯಾಗಿದ್ದಾರೆ.ಆಡಳಿತ ವಿಭಾಗದ ಕಾರ್ಯದರ್ಶಿಯಾಗಿ ಇಕ್ಬಾಲ್ ಸುಹೈಲ್, ಹಣಕಾಸು ಕಾರ್ಯದರ್ಶಿಯಾಗಿ ಮುಬೀನ್ ದಾಮೂದಿ ಹಾಗೂ ಲೆಕ್ಕಪರಿಶೋಧಕರಾಗಿ ಬಿಲಾಲ್ ಕಮ್ರಿ ಅವರನ್ನು ನೇಮಕ ಮಾಡಲಾಗಿದೆ.

ಶತಮಾನಕ್ಕೂ ಅಧಿಕ ಇತಿಹಾಸ ಹೊಂದಿರುವ ಈ ಸಂಸ್ಥೆ ಭಟ್ಕಳ ಮಾತ್ರವಲ್ಲದೆ ಕರಾವಳಿ ಭಾಗದ ಮುಸ್ಲಿಂ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಮಾರ್ಗದರ್ಶನ ನೀಡುವ ಪ್ರಮುಖ ಸಂಘಟನೆಯಾಗಿ ಗುರುತಿಸಿಕೊಂಡಿದೆ.
ನೂತನ ಪದಾಧಿಕಾರಿಗಳ ತಂಡವು ಸಮುದಾಯದ ಅಭಿವೃದ್ಧಿ, ಶಿಕ್ಷಣೋನ್ನತಿ ಮತ್ತು ಜನಸೇವೆಯ ಕ್ಷೇತ್ರಗಳಲ್ಲಿ ಇನ್ನಷ್ಟು ಪರಿಣಾಮಕಾರಿ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸವನ್ನು ಸದಸ್ಯರು ವ್ಯಕ್ತಪಡಿಸಿದ್ದಾರೆ.
