ತನ್ನನ್ನೇ ಮದುವೆಯಾಗು ಎಂದು ಪೀಡಿಸುತ್ತಿದ್ದ ಯುವತಿಯ ಕಾಟ ತಾಳಲಾರದೆ ಮನೆ ಬಿಟ್ಟುಹೋದ ಯುವಕ
ಜೇವರ್ಗಿ-ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ಯುವತಿಯ ಕಾಟಕ್ಕೆ ಯುವಕನೊಬ್ಬ ಮನೆ ಬಿಟ್ಟುಹೋದ ಘಟನೆ ನಡೆದಿದೆ.
ಮನೆ ಬಿಟ್ಟು ಹೋದ ಯುವಕ ಹರವಾಳ ಗ್ರಾಮದ ಮರೆಪ್ಪ ಎಂದು ತಿಳಿದುಬಂದಿದೆ.
ಮರೆಪ್ಪ ಬೀದರ್ ಜಿಲ್ಲಾ ಪಂಚಾಯತಿಯಲ್ಲಿ ನರೇಗಾ ಸಂಯೋಜಕರಾಗಿದ್ದು, ಬೀದರ್’ನಲ್ಲೇ ಯುವತಿ ನೋಡಿದ್ದನು. ಆದರೆ ಯುವತಿ ಮರೆಪ್ಪನನ್ನು ತಿರಸ್ಕರಿಸಿದ್ದಳು. ಬಳಿಕ ಬೇರೆ ಯುವತಿಯೊಂದಿಗೆ ಆತ ನಿಶ್ಚಿತಾರ್ಥ ಮಾಡಿಕೊಂಡಿದ್ದನು. ಕೆಲ ದಿನಗಳ ನಂತರ ರಿಜೆಕ್ಟ್ ಮಾಡಿದ್ದ ಯುವತಿ ಮರೆಪ್ಪ ಮತ್ತೆ ಭೇಟಿಯಾಗಿದ್ದಾರೆ. ಯುವತಿ ಮರೆಪ್ಪನಿಗೆ ಫೋನ್, ಮೆಸೇಜ್ ಮಾಡುತ್ತಿದ್ದಳು ಎನ್ನಲಾಗುತ್ತಿದೆ. ಇನ್ನೂ ನಿಶ್ಚಿತಾರ್ಥದ ವಿಷಯ ತಿಳಿದು ತನ್ನನ್ನೇ ಮದುವೆಯಾಗುವಂತೆ ಪೀಡಿಸಿದ್ದಾಳೆ.
ನಿಶ್ಚಿತಾರ್ಥವನ್ನು ರಿಜೆಕ್ಟ್ ಮಾಡಿ ಮದುವೆಯಾಗುವಂತೆ ಒತ್ತಾಯ ಮಾಡಿದ್ದಾಳೆ. ಯವತಿಯ ಕಾಟಕ್ಕೆ ಮರೆಪ್ಪ 5 ಪುಟಗಳ ಲೇಟರ್ ಬರೆದಿಟ್ಟು ಮನೆ ಬಿಟ್ಟು ಹೋಗಿದ್ದಾನೆ. ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.