ಮದುವೆಯ ಮುನ್ನಾ ದಿನವೇ ಮನೆಯಲ್ಲಿ ಕುಸಿದು ಬಿದ್ದು ಮದುಮಗಳು ಸಾವು
ಕೇರಳ: ಕೇರಳದ ಮಲಪ್ಪುರಂ ಜಿಲ್ಲೆಯ ಪೆರಿಂದಲ್ ಮನ್ನ ಎಂಬಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಬೇಕಾಗಿದ್ದ ಯುವತಿಯೊಬ್ಬಳು ಮದುವೆಯ ಮುನ್ನಾ ದಿನವೇ ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಮೃತಪಟ್ಟವರು ಪಥೈಕ್ಕರ ಸ್ಕೂಲ್ ಪಡಿ ಕಿಝಕ್ಕೆಥಿಲ್ ನಿವಾಸಿ ಮುಸ್ತಫಾ ಮತ್ತು ಝೀನತ್ ದಂಪತಿಯ ಪುತ್ರಿ ಫಾತಿಮಾ ಬತೂರ್ ಎಂದು ತಿಳಿದುಬಂದಿದೆ.
ಜನವರಿ 14ರಂದು ಆಕೆಯ ಮದುವೆ ಮೂರ್ಕರ್ನಾಡ್’ಯ ಯುವಕನೊಂದಿಗೆ ನಿಶ್ಚಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಮನೆಯಲ್ಲಿ ಮದುರಂಗಿ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಫೋಟೋ ತೆಗೆಯುವಾಗ ಯುವತಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.