ಜೆಡಿಎಸ್ ಪಕ್ಷಕ್ಕೆ ಹೊಸ ಶಕ್ತಿ ತಂದ ಯುವನಾಯಕ ಉತ್ತರ ಕನ್ನಡ ಜಿಲ್ಲೆಯ ಜೆಡಿಎಸ್ ಉಸ್ತುವಾರಿ ಯಾಗಿ ನೇಮಕಗೊಂಡ ಶಿರಸಿ ಯ ಗಣಪತಿ ನಾಯ್ಕ .
ಶಿರಸಿ-ಉತ್ತರ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಕೊರತೆಯಿಂದ ಕಾರ್ಯಕರ್ತರು ಹಾಗೋ ಮುಖಂಡರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದತ್ತ ಮುಖ ಮಾಡುತ್ತಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ, ಕುಮಟಾ,ಹೊನ್ನಾವರ,ಅಂಕೋಲಾ ಕ್ಷೇತ್ರ ಬಿಟ್ಟರೆ ಉಳಿದ ಕ್ಷೇತ್ರ ಗಳಲ್ಲಿ ಪ್ರಾಬಲ್ಯ ಇಲ್ಲ ಎನ್ನುವದು ತಜ್ಞರ ಅಭಿಪ್ರಾಯ ಆಗಿತ್ತು,
ಆದರೆ ಜಿಲ್ಲೆಯಲ್ಲಿ ಕುಮಾರ್ ಸ್ವಾಮಿಯವರ ಪಂಚರತ್ನ ಯಾತ್ರೆ ಕಾರ್ಯಕ್ರಮದ ಆಗಮನದ ಮೂಲಕ ಜಿಲ್ಲೆಯ ಅಭ್ಯರ್ಥಿಗಳಿಗೆ ,ಕಾರ್ಯಕರ್ತರಿಗೆ , ಪದಾಧಿಕಾರಿಗಳಿಗೆ ,ಹೊಸ ಆನೆಬಲ, ಉತ್ಸಾಹ,ಹುರುಪು,ಬಂದಿದೆ. ಕುಮಟಾ ಮತ್ತು ಹೊನ್ನಾವರ ಕ್ಷೇತ್ರದಲ್ಲಿ ,ಜೆಡಿಎಸ್ ನೆಲೆ ಕಂಡುಕೊಳ್ಳಲು ಸೂರಜ್ ನಾಯ್ಕ್ ಅವರ ನಾಯಕತ್ವ ಕಾರಣವಾಗಿದೆ. ಸೂರಜ್ ನಾಯ್ಕ್ ಮತ್ತು ನೇಮಕವಾದ ಕ್ಷೇತ್ರದ ಎಲ್ಲಾ ಅಭ್ಯರ್ಥಿ ಗಳಿಗೆ ಹೊಸದಾಗಿ,ನಿಯೋಜನೆ ಗೊಂಡ ಜಿಲ್ಲಾ ಉಸ್ತುವಾರಿ ಗಳಾದ ಗಣಪತಿ ನಾಯ್ಕ ಮತ್ತು,ರಾಜು ಮಾಸ್ಟಿಹಳ್ಳ ಬೆನ್ನೆಲುಬಾಗಿ ಇದ್ದು ಪಕ್ಷ ಕಟ್ಟುವ ಬೆಳೆಸುವ ನಿಟ್ಟಿನಲ್ಲಿ ಸಂಪೂರ್ಣ ಬೆಂಬಲ ಕೊಡುತ್ತೇವೆ ಕೊಡುತ್ತೇವೆ ಎಂದು ಹೇಳಿದರು .
ಮುಂಬರುವ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆ ಯನ್ನು ಮಾದರಿ ಜೆಡಿಎಸ್ ನಾ ಜಿಲ್ಲೆಯನ್ನಾಗಿ ಮಾಡುವದು ನನ್ನ ಗುರಿ ಎಂದು ಹೇಳಿದರು,ನನಗೆ ನೀಡಿದ ಜವಾಬ್ಧಾರಿಯನ್ನು ಸ್ವಚ್ಚವಾಗಿ ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದು ಅವರು ಹೇಳಿದರು.
ಈ ಭಾರಿಯ ವಿಧಾನ ಸಭಾ ಚುನಾವಣೆಯಲ್ಲಿ ನಮ್ಮ ಜಿಲ್ಲೆಯಲ್ಲಿ, ಕನಿಷ್ಟ 2 ರಿಂದ 3 ಅಭ್ಯರ್ಥಿ ಗಳ ನ್ನಾ ಗೆಲ್ಲಿಸಿ ಕೊಡುವ ವಿಶ್ವಾಸವನ್ನು ಅವರು ವ್ಯಕ್ತ ಪಡಿಸಿದರು.
ಕ್ಷೇತ್ರದ ಅಭ್ಯರ್ಥಿಗಳ ಮತ್ತು,ಜಿಲ್ಲಾ ತಂಡ , ಹಾಗೋ ಕಾರ್ಯಕರ್ತರ ಜೊತೆಗೂಡಿ ಯುವಕರೀಗೆಮತ್ತು, ಬಡವರೀಗೆಮಹಿಳೆಯಾರಿಗೆ,ಕೂಲಿ ಕಾರ್ಮಿಕರಿಗೆ,ರೈತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.
ಒಟ್ಟಾರೆಯಾಗಿ ಉತ್ತರ ಕನ್ನಡ ಜಿಲ್ಲೆಯ ಜೆಡಿಎಸ್ ಬಳಗದಲ್ಲಿ ಹೊಸ ಯುವ ಉಸ್ತುವಾರಿ ಆಗಮನದಿಂದ ಜಿಲ್ಲೆಯ ,ಅಭ್ಯರ್ಥಿಗಳಿಗೆ , ಜಿಲ್ಲಾ ತಂಡಕ್ಕೆ, ಹಾಗೂ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರೀಗೆ ಹೊಸ ಬಲ ಮತ್ತು ಭರವಸೆ ಬಂದಂತಾಗಿದೆ.