ಬೈಂದೂರು-ಶನಿವಾರ ಬೆಂಗಳೂರಿನಲ್ಲಿ ನಡೆದ ವಿಸ್ತಾರ ನ್ಯೂಸ್ ರವರ ವತಿಯಿಂದ ನೀಡುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ವಯಕ್ತಿಕವಾಗಿ ಇಷ್ಟ ಪಡುವ ಮತ್ತು ಕೋವಿಡ್ ಸಮಯದಲ್ಲಿ ಸಾವಿರಾರು ಜನರಿಗೆ ಸಹಾಯ ನೀಡಿದ ಸೋನುಸೂದ್ ಅವರವರಿಂದ ಪ್ರಶಸ್ತಿ ಸ್ವೀಕರಿಸಿದರು. ಅವರ ಕ್ಯಾಟರಿಂಗ್ ಸಂಸ್ಥೆಯು ತಯಾರಿಸುವ ಆಹಾರ ಮತ್ತು ಗುಣಮಟ್ಟ ಕ್ಕೆ ” Business Excellence Award – 2024′ ಪ್ರಶಸ್ತಿ ಅವರಿಗೆ ಸಿಕ್ಕಿದೆ. ಪ್ರಶಸ್ತಿ ನೀಡಿ ಸನ್ಮಾನಿಸಿದ ವಿಸ್ತಾರ ನ್ಯೂಸ್ ನ ಎಲ್ಲಾ ಸಿಬ್ಬಂದಿ ವರ್ಗದವರಿಗೂ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.