ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 606ಅಂಕ ಗಳಿಸಿದ ಮೂಡಿಗೆರೆ ಬೆಥನಿ ಪ್ರೌಢಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿ ಸಿಯೋಲ್ ಪ್ರಿಸ್ಟನ್ ಕಾರ್ಲೋ ಗೆ
ಸನ್ಮಾನ
ಮೂಡಿಗೆರೆ-2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಥನಿ ಪ್ರೌಢಶಾಲೆಯ ವಿದ್ಯಾರ್ಥಿಯಾದ “ಸಿಯೋಲ್ ಪ್ರಿಸ್ಟನ್ ಕಾರ್ಲೋ” ರವರು 625ಕ್ಕೆ 606 ಅಂಕಗಳನ್ನು ಪಡೆದುಕೊಂಡು ಬೆಥನಿ ಶಾಲೆಗೆ ಕೀರ್ತಿಯನ್ನು ತಂದಿದ್ದಾನೆ. ಹಾಗೂ ಇಡೀ ತಾಲೂಕಿಗೆ ಕೀರ್ತಿಯನ್ನು ತಂದಿದ್ದಾನೆಂದರೆ ತಪ್ಪಾಗಲಾರದು.ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 606ಅಂಕಗಳನ್ನು ಗಳಿಸಿದ್ದಕ್ಕೆ ಇಂದು ದೀನ ದಯಾಳು ಉಪಾಧ್ಯಾಯ ಭವನದಲ್ಲಿ ಸಿಯಲ್ ರವರನ್ನು ಪ್ರತಿಭಾನ್ವಿತ ವಿದ್ಯಾರ್ಥಿ ಎಂದು ಗುರುತಿಸಿ ಸನ್ಮಾನಿಸಲಾಯಿತು.
ಕಿರು ಪರಿಚಯ
*************
ತಂದೆ ಸಿಲಾ ಚಂದ್ರ ಕಾರ್ಲೋ , ತಾಯಿ ಪ್ರಿಮಾ ಡಿಸೋಜಾ ರವರ ಮಗನಾದ ಸಿಯೋಲ್ ರವರು ಒಂದನೇ ತರಗತಿಯಿಂದ ಮೂರನೇ ತರಗತಿಯವರೆಗೆ ರಾಜಗಿರಿ ಇಂಟರ್ನ್ಯಾಷನಲ್ ಶಾಲೆ, ದುಬೈ ನಲ್ಲಿ ವಿದ್ಯಾಭ್ಯಾಸ ಮಾಡಿದ್ದು ನಂತರ ನಾಲ್ಕನೇ ತರಗತಿಯಿಂದ 10ನೇ ತರಗತಿಯವರೆಗೆ ಮೂಡಿಗೆರೆಯ ಬೆಥನಿ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ್ದು, ಉತ್ತಮ ಅಂಕವನ್ನು ಪಡೆದುಕೊಂಡು ಶಾಲೆಗೆ ಕೀರ್ತಿಯನ್ನು ತಂದಿದ್ದಾನೆ, ಅಲ್ಲದೆ ದುಬೈ ನಿಂದ ಬಂದಿದ್ದರು ಕೂಡ ಎಸ್ .ಎಸ್ .ಎಲ್. ಸಿ ಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದುಕೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ ಪೂರ್ಣಾಂಕವನ್ನು ಗಳಿಸಲು ಆತನು ಪಟ್ಟ ಪರಿಶ್ರಮ, ತಂದೆ ತಾಯಿಗಳ ಪರಿಶ್ರಮ, ಹಾಗೂ ಕನ್ನಡ ಶಿಕ್ಷಕರ ಪರಿಶ್ರಮ ನಿಜಕ್ಕೂ ಮೆಚ್ಚುವಂತದ್ದು ಇಂತಹ ಮಗನನ್ನು ಪಡೆದಂತಹ ಆತನ ತಂದೆ ತಾಯಿ ನಿಜಕ್ಕೂ ಪುಣ್ಯವಂತರು.
ಆತನ ಎಸ್ಎಸ್ಎಲ್ಸಿ ಅಂಕಗಳ ವಿವರ ಕೆಳಕಂಡಂತಿದೆ
ಕನ್ನಡ- 125/125
ಇಂಗ್ಲಿಷ್ -99/100
ಹಿಂದಿ-99/100
ಗಣಿತ – 92/100
ವಿಜ್ಞಾನ 93/100
ಸಮಾಜ ವಿಜ್ಞಾನ -98/100
ಒಟ್ಟು ಅಂಕ_ 606
ಮುಂದೆ ಈ ವಿದ್ಯಾರ್ಥಿಯು ಉತ್ತಮವಾದ ಅಂಕಗಳನ್ನು ಪಡೆದುಕೊಳ್ಳಲಿ ಎಂದು ಹಾರೈಸೋಣ.