ಮೂಡಿಗೆರೆ-ಬೀದರ್ ನ ಜಗದ್ಗುರು ಘನ ಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠ, ಅಭಿನವಶ್ರೀ ಪ್ರಕಾಶನ, ಅಭಿನವ ಶ್ರೀಗಳ 38ನೇ ಜನ್ಮದಿನೋತ್ಸವ, 19ನೇ ಪಟ್ಟಧಿಕಾರ ವರ್ಧಂತಿ ಮಹೋತ್ಸವ ಹಾಗೂ ಗ್ರಂಥಗಳ ಲೋಕಾರ್ಪಣೆ ಸಮಾರಂಭ ಇತ್ತೀಚೆಗೆ ಬೀದರ್ ಜಿಲ್ಲೆಯ ಬಸವ ಕಲ್ಯಾಣದ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠದಲ್ಲಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಶ್ರೀ ಮಠದ ವತಿಯಿಂದ ಕೊಡ ಮಾಡುವ ” ಅಭಿನವಶ್ರೀ” ಪ್ರಶಸ್ತಿ ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆಯ ಗಾಯಕಿ, ನಿರೂಪಕಿ, ಶಿಕ್ಷಕಿ ಡಾಕ್ಟರ್ ವಿದ್ಯಾ ಕೆ ರವರಿಗೆ ಲಭಿಸಿದೆ. ಇವರಿಗೆ ಈ ಪ್ರಶಸ್ತಿ ಲಭಿಸಿರುವುದು ಬಹಳ ಹೆಮ್ಮೆಯ ವಿಚಾರವಾಗಿದೆ.
ಅಭಿನವ ಶ್ರೀಗಳ ಮೊಬೈಲ್ ಜಾಗೃತಿ ಪಾದಯಾತ್ರೆ ಬಿಡುಗಡೆಯಾದ ಗ್ರಂಥದಲ್ಲಿ ಇವರ ಅತ್ಯುತ್ತಮವಾದ ಓ ಜಂಗಮವಾಣಿಯೇ ಏನೀ ನಿನ್ನ ಮಾಯೆ ಕವನ ಆಯ್ಕೆಯಾಗಿ ಪ್ರಕಟಗೊಂಡಿರುವುದರಿಂದ ದಿನಾಂಕ : 28 /9 /2024 ರಂದು ಡಾ.ವಿದ್ಯಾ. ಕೆ ರವರಿಗೆ “ಅಭಿನವಶ್ರೀ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.