ಭಟ್ಕಳ- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಂಡಳ್ಳಿಯ ಗ್ರಾಮ ಪಂಚಾಯತನ 2022-23 ರ ಮೊದಲ ಹಂತದ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷ ನಾಗಪ್ಪ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 18 ರಂದು ಬೆಳ್ಳಿಗೆ 11 ಗಂಟೆಗೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಸಭೆಯ ಆರಂಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗ್ರಾಮ ಸಭೆಗೆ ಅಗಮಿಸಿದ ಎಲ್ಲರನ್ನು ಸ್ವಾಗತಿಸುವುದರೊಂದಿಗೆ ಸಭೆ ಆರಂಭಗೊಂಡಿತು. ನಂತರ ವಿವಿಧ ಸರಕಾರಿ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯಿಂದ ಸಿಗುವ ಯೋಜನೆಗಳನ್ನು ಮತ್ತು ಸೌಲಭ್ಯಗಳನ್ನು ಗ್ರಾಮಸ್ಥರಿಗೆ ವಿವರಿಸಿದರು.
ನಂತರ ಪೊಲೀಸ ಇಲಾಖೆ ಪರವಾಗಿ ಭಟ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಎ.ಎಸ್ .ಐ ನವೀನ್ ರಾಥೋಡ್ ಗ್ರಾಮ ಸಭೆಗೆ ಆಗಮಿಸಿದ್ದರು. ಅವರು ಮಾತನಾಡುವಾಗ ಮುಂಡಳ್ಳಿ ಗ್ರಾಮಸ್ಥರು ಸಮಸ್ಯೆಗಳ ಸುರಿ ಮಳೆ ಹರಿಸಿದರು. ಗ್ರಾಮಸ್ಥರಾದ ಹಿರಿಯ ಮುಖಂಡ ತಿಮಪ್ಪ ನಾಯ್ಕ ನಿರಗದ್ದೆ, ವಿಷ್ಣು ನಾಯ್ಕ ಹೊಸಮನೆ, ಧರ್ಮೇಂದ್ರ ನಾಯ್ಕ , ದೇವೇಂದ್ರ ನಾಯ್ಕ , ರಾಮ ನಾಯ್ಕ, ಮುಂತಾದವರು ಮಾತನಾಡಿ ಮುಂಡಳ್ಳಿ ಗ್ರಾಮದಲ್ಲಿ ಅಕ್ರಮ ದಂಧೆಗಳಾದ ಮಟ್ಕಾ ದಂಧೆ, ಅಕ್ರಮ ಸಾರಾಯಿ ಮಾರಾಟ , ಜೂಜಾಟ, ಅಕ್ರಮ ಗೋ ಸಾಗಾಟ ಮುಂತಾದ ಅಕ್ರಮ ದಂಧೆಗಳು ಯಾರ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿದೆ ಎಂದು ತಿಳಿಸಿದರು. ನಿಮ್ಮ ಪೋಲಿಸ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನೆ ಕೇಳಿದರು. ನಂತರ ಗ್ರಾಮಸ್ಥರೊಬ್ಬರು ಮಾತನಾಡಿ ಮುಂಡಳ್ಳಿ ಗ್ರಾಮದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ಭಟ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ಫೋನ್ ಮಾಡಿ ಮಾಹಿಟಿ ತಿಳಿಸಿದರೆ ನಿಮ್ಮ ಅಧಿಕಾರಿಗಳು ಮಾಹಿತಿ ನೀಡಿದವರ ಹೆಸರು ಬಹಿರಂಗ ಪಡಿಸುತ್ತಾರೆ ಎಂದು ದೂರಿದರು.ಮುಂಡಳ್ಳಿ ಗ್ರಾಮದಲ್ಲಿ ನಡೆಯುವಅಕ್ರಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ಬಂದ ಮಾಡುವಂತೆ ಸಭೆಯಲ್ಲಿ ಒಕ್ಕೊರಲಿನಿಂದ ಟರಾವು ಪಾಸ್ ಮಾಡಿ ಮೇಲಾಧಿಕಾರಿಗಳಿಗೆ ನೀಡಲು ಸಮ್ಮತಿಸಲಾಯಿತು.
ನಂತರ ಸಬೇಗೆ ಆಗಮಿಸಿದ ಅಬಕಾರಿ ಇಲಾಖೆ ಉಪನಿರೀಕ್ಷರಿಗೆ ಗ್ರಾಮಸ್ಥರೊಬ್ಬರು ಮುಂಡಳ್ಳಿಯಲ್ಲಿ ಎಷ್ಟು ಅನುಮತಿ ಪಡೆದ ವೈನ್ ಶಾಪ್ ಗಳು ಇದೆ ಎಂದು ಕೇಳಿದಾಗ ಮಾಹಿತಿ ಕೊರತೆ ಇಂದ ಅವರು ಅಸ್ಪಷ್ಟ ಉತ್ತರ ನೀಡಿದರು. ಮುಂಡಳ್ಳಿಯಲ್ಲಿ ಗಲ್ಲಿ ಗಲ್ಲಿ ಗಳಲ್ಲಿ ಅಕ್ರಮ ಸಾರಾಯಿ ರಾಜ ರೋಷವಾಗಿ ಮಾರಾಟ ಮಾಡಲಾಗುತ್ತದೆ ಎಂದು ಗ್ರಾಮಸ್ಥರು ದೂರಿದರು. ಒಟ್ಟಾರೆಯಾಗಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಮುಂಡಳ್ಳಿಯಲ್ಲಿ ನಡೆಯುವ ಅಕ್ರಮ ಚುಟುವಟಿಕೆಗಲಾದ ಮಟ್ಕಾ ದಂಧೆ, ಅಕ್ರಮ ಸಾರಾಯಿ ದಂಧೆ, ಜೂಜಾಟ, ಅಕ್ರಮ ಗೋ ಸಾಗಾಟ ಮುಂತಾದ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಣ ಮಾಡುವಂತೆ ಅಧಿಕಾರಿಗಳಿಗೆ ತಿಳುಸಿದರು.
ಸಭೆಯಲ್ಲಿ ಮುಂಡಳ್ಳಿ ಪಂಚಾಯತ್ ಸದಸ್ಯರು, ವಿವಿಧ ಸರಕಾರಿ ಇಲಾಖೆ ಅಧಿಕಾರಿಗಳು , ಮುಂಡಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು