ಹಿಂದೂ ಹುಡುಗಿಯೊಂದಿಗೆ ಸುತ್ತಾಡುತ್ತ , ಮಜಾ ಮಜಾ ಉಡಾಯಿಸಿತ್ತಿದ್ದ ಮುಸ್ಲಿಂ ಹುಡುಗನಿಗೆ ಸಾರ್ವಜನಿಕರಿಂದ ಥಳಿತ- ಲವ್ ಜಿಹಾದ್ ಶಂಕೆ ?
ಸುಬ್ರಹ್ಮಣ್ಯ- ಹಿಂದೂ ಹುಡುಗಿ ಜೊತೆ ತಿರುಗಾಡುತ್ತಿದ್ದಾನೆಂದು ಆರೋಪಿಸಿ ಮುಸ್ಲಿಂ ಯುವಕನಿಗೆ ಥಳಿಸಿದ ಘಟನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಯುವಕ ಆಸ್ಪತ್ತೆಗೆ ದಾಖಲಾಗಿ ಪೊಲೀಸ್ ದೂರು ನೀಡಿದ್ದಾನೆ.
ಹಲ್ಲೆಗೊಳಗಾದ ಯುವಕ ಸುಳ್ಯ ತಾಲೂಕಿನ ಕಲ್ಲುಗುಂಡಿಯ ಅಫೀದ್ ಎಂದು ತಿಳಿದು ಬಂದಿದ್ದು, ಗಂಭೀರ ಗಾಯಗೊಂಡ ಈತ ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ. ಯುವಕನ ದೂರಿನಂತೆ ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಕುಕ್ಕೆ ಸುಬ್ರಹ್ಮಣ್ಯದ ಬಸ್ ಸ್ಟ್ಯಾಂಡ್ ನಲ್ಲಿ ಹುಡುಗ ಮತ್ತು ಹುಡುಗಿ ಕಂಡು ಬಂದಿದ್ದು, ಬಳಿಕ ಈ ಜೋಡಿ ಕುಮಾರಧಾರ ಬಳಿ ಬಂದಾಗ ಯುವಕರ ಗುಂಪೊಂದು ಯುವಕನಿಗೆ ಥಳಿಸಿದ್ದಾರೆ ಎಂದು ಅರೋಪಿಸಲಾಗಿದೆ.