ಜ್ಯುವೆಲ್ಲರಿ ಅಂಗಡಿ ಸಿಬ್ಬಂದಿಗೆ ಚೂರಿ ಇರಿದು ಪರಾರಿಯಾದ ದುಷ್ಕರ್ಮಿಗಳು
ಮಂಗಳೂರು-ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಜ್ಯುವೆಲ್ಲರಿ ಅಂಗಡಿಯ ಸಿಬ್ಬಂದಿಗೆ ಚೂರಿ ಇರಿದ ಘಟನೆ ನಗರದ ಹಂಪನಕಟ್ಟೆ ಮಿಲಾಗ್ರಿಸ್ ಸಮೀಪ ಇಂದು ಸಂಭವಿಸಿದೆ.
ಅಂಗಡಿಯಲ್ಲಿ ಒಬ್ಬರೇ ಇರುವ ಸಂದರ್ಭ ನುಗ್ಗಿದ ದುಷ್ಕರ್ಮಿ ಸಿಬ್ಬಂದಿಗೆ ಚೂರಿ ಇರಿದಿದ್ದಾರೆ. ಚೂರಿ ಇರಿತದಿಂದ ಗಾಯಗೊಂಡಿರುವ ಸಿಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದರೋಡೆಯೆ ಬೇರೆ ಕಾರಣವೇ ತಿಳಿದು ಬಂದಿಲ್ಲ.ಅಂಗಡಿ ಮಾಲಕರು ಊಟ ಮಾಡಿ ವಾಪಸ್ ಆದಾಗ ಘಟನೆ ಗಮನಕ್ಕೆ ಬಂದಿದೆ.
ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ