ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಿಬಿಡುವುದರ ಜೊತೆಗೆ ಸಮಾಜದಲ್ಲಿ ಅಶಾಂತಿ ಮೂಡಿಸಲು ಪ್ರಯತ್ನಿಸುತ್ತಿರುವ ಎಸ್.ಡಿ.ಪಿ.ಐ ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಭಟ್ಕಳ ಬಿಜೆಪಿ ಮಂಡಲ ವತಿಯಿಂದ ಡಿವೈಎಸ್ಪಿ ಗೆ ದೂರು
ಭಟ್ಕಳ: ಭಟ್ಕಳದ ಹಿಂದೂ ಮುಖಂಡರನ್ನು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಗೂಂಡಾ ಎಂದು ಸಂಬೋಧಿಸಿದ್ದಲ್ಲದೇ, ಅಶಾಂತಿ ಸೃಷ್ಟಿಸಲು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಿಬಿಡುವುದರ ಜೊತೆಗೆ ಸುಳ್ಳು ದೂರು ನೀಡಿರುವ ಎಸ್.ಡಿ.ಪಿ.ಐ ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಭಟ್ಕಳ ಬಿಜೆಪಿ ಮಂಡಲ ವತಿಯಿಂದ ಡಿವೈಎಸ್ಪಿ ಗೆ ಮನವಿ ಸಲ್ಲಿಸಿದರು.
ಜ.14 ರಂದು ಜಾಲಿ ಭಟ್ಕಳ ಪಂಚಾಯತ ವ್ಯಾಪ್ತಿಯಲ್ಲಿರುವ ದೇವಿ ನಗರದ ರಸ್ತೆ ಬದಿಯಲ್ಲಿ ಅನಾದಿಕಾಲದಿಂದಲೂ ಇದ್ದಂತಹ ದೇವಿ ನಗರ ಹೆಸರಿನ ನಾಮಫಲಕವನ್ನು ಅಲ್ಲಿನ ಗ್ರಾಮಸ್ಥರು ನವೀಕರಣಗೊಳಿಸಲು ಮುಂದಾದಾಗ, ಎಸ್.ಡಿ.ಪಿ.ಐ ಗೆ ಸೇರಿದ ಮುಸ್ಲಿಂ ಸಮುದಾಯದ ಕೆಲವರು ಮಸೀದಿಯ ಮೇಲೆ ಭಗವಾಧ್ವಜ ಹಾಕುತ್ತಾರೆಂದು ತಪ್ಪು ಮಾಹಿತಿ ರವಾನಿಸಿದ ಕಾರಣ ಪೋಲೀಸರು ಸ್ಥಳಕ್ಕೆ ಆಗಮಿಸಿದ್ದರು. ಕೇವಲ ಇದ್ದಂತ ನಾಮಫಲಕವನ್ನು ನವೀಕರಣಗೊಳಿಸುವುದೆಂದು ಗ್ರಾಮಸ್ಥರು ನಿಜಾಂಶವನ್ನು ತಿಳಿಸಿ ಅದೇ ಸಮಯದಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಗ್ರಾಮಸ್ಥರಿಗೆ ಮರುದಿನ ಬೆಳಿಗ್ಗೆ 9 ಗಂಟೆಗೆ ಬಂದು ಸಮಸ್ಯೆ ಆಲಿಸುವುದಾಗಿ ತಿಳಿಸಿದರು. ಅದರಂತೆ ಮರುದಿನ ಸಮಸ್ಯೆ ಆಲಿಸಲು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ಬರುವಿಕೆಗಾಗಿ ದೇವಿನಗರದ ಗ್ರಾಮಸ್ಥರು ಸ್ಥಳದಲ್ಲಿ ಸೇರಿದ್ದರು. ಇಷ್ಟು ವಿಷಯ ಬಿಟ್ಟರೆ ಯಾವುದೇ ರೀತಿಯ ಭಗವಾಧ್ವಜ ಹಾರಿಸುವ ಅಥವಾ ಕೋಮು ಅಶಾಂತಿಯನ್ನು ಸೃಷ್ಟಿಸುವ ಯಾವುದೆ ವಿಚಾರಗಳು ಇರದಿದ್ದರೂ ಸಹ ಅಂದು ಎಸ್.ಡಿ.ಪಿ.ಐನ ಅಣತಿಯಂತೆ ಎಸ್.ಡಿ.ಪಿ.ಐ. ಕಾರ್ಯಕರ್ತರಾದ ರಝಾಕ್ ಹುಸೇನ್ ಬ್ಯಾರಿ ಹಾಗೂ ಸೋಪಾ ಶಮಿ ನಾಮಫಲಕದ ಹತ್ತಿರದಲ್ಲಿರುವ ಮಸೀದಿಯ ಮೇಲೆ ಹಾಗೂ ಮಸೀದಿಯ ಮುಂಭಾಗದಲ್ಲಿ ಹಿಂದೂಗಳು ಭಗವಾಧ್ವಜ (ಕೇಸರಿ) ಹಾಕುತ್ತಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೋ ಮೆಸೆಜ್ಗಳನ್ನು ಹರಿಬಿಟ್ಟು ಪ್ರಚೋದನಾಕಾರಿ ಹಾಗೂ ಸುಳ್ಳು ಮಾಹಿತಿಯನ್ನು ಅವರ ಕೋಮಿನವರಿಗೆ ನೀಡಿ ಸ್ಥಳಕ್ಕಾಗಮಿಸುವಂತೆ ಕರೆನೀಡುತ್ತಾರೆ. ಪೋಲೀಸರು ಸಹ ಇವರ ಸುಳ್ಳು ಮಾಹಿತಿಯನ್ನು ನಂಬಿ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಪೋಲೀಸ್ ಬಂದೋಬಸ್ತ್ ಮಾಡುವಂತೆ ಮಾಡಿರುತ್ತಾರೆ. ಪ್ರಚೋಧನಾಕಾರಿ ಸುಳ್ಳು ಆಡಿಯೋ ಹರಿಬಿತ್ತಿದ್ದಲ್ಲದೆ ಎಸ್.ಡಿ.ಪಿ.ಐ. ಕಾರ್ಯಕರ್ತನಾದ ಮುಕ್ತಾರ್ ಮೋಹಮ್ಮದ್ ಕುಟ್ಟಿಕೋಡಿ ವಿಡಿಯೊ ಕರೆ ಮೂಲಕ ಹಿಂದೂ ಕಾರ್ಯಕರ್ತರಿಗೆ ಜೀವ ಬೆದರಿಕೆ ಹಾಕಿದ್ದು ಇದರ ವಿರುದ್ಧ ಶಹರ ಠಾಣೆಯಲ್ಲಿ ಜಾಲಿ ಪಟ್ಟಣ ಪಂಚಾಯತ್ ಸದಸ್ಯರಾದ ದಯಾನಂದ ನಾಯ್ಕ ಪ್ರಕರಣ ದಾಖಲಿಸಿದ್ದಾರೆ.
ದೇವಿನಗರದ ಗ್ರಾಮಸ್ಥರು ಹಾಗೂ ಹಿಂದೂ ಕಾರ್ಯಕರ್ತರು ನಾಮಫಲಕ ನವೀಕರಣಕ್ಕೆ ಮುಂದಾಗಿದ್ದು ಬಿಟ್ಟರೇ ಇನ್ಯಾವುದೇ ದುರುದ್ದೇಶವಿರಲಿಲ್ಲ ಎಂಬುದಕ್ಕೆ ಅಂದು ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಪೋಲೀಸ್ ಆಯುಕ್ತರು ಕಬ್ಬಿಣದ ಕಂಬದ ನಾಮಫಲಕವನ್ನು ಅವರೇ ಖುದ್ದಾಗಿ ನಮ್ಮ ಕಾರ್ಯಕರ್ತರ ಕೈಯ್ಯಲ್ಲಿರುವುದನ್ನು ನೋಡಿರುತ್ತಾರೆ ಹಾಗೂ ಅದಕ್ಕೆ ತಮ್ಮಲ್ಲಿ ವಿಡಿಯೋ ಸಾಕ್ಷಿ ಸಹ ಇರುತ್ತದೆ ಹಾಗೂ ಅದನ್ನು ಸ್ಥಳಕ್ಕಾಗಮಿಸಿದ ತಹಶೀಲ್ದಾರರಿಗೆ, ಪೋಲೀಸ ಅಧಿಕಾರಿಗಳಿಗೆ ಸ್ಥಳದಲ್ಲಿ ನಾಮಫಲಕವನ್ನು ತೋರಿಸಿ ಮನವರಿಕೆಯನ್ನು ಸಹ ಮಾಡಿರುತ್ತೇವೆ. ಕೇವಲ ನಾಮಫಲಕದ ವಿಷಯವನ್ನು ಇನ್ಯಾವುದೋ ವಿಷಯವೆಂದು ಬಿಂಬಿಸಿ ಕೋಮು ಪ್ರಚೋಧನೆಯ ಮೂಲಕ ಅಶಾಂತಿ ಸೃಷ್ಟಿಸಲು ಎಸ್.ಡಿ.ಪಿ.ಐ ಅಂದಿನ ದಿನ ಹುನ್ನಾರ ನಡೆಸಿದ್ದು ಈಗಾಗಲೇ ಅವರ ಕಾರ್ಯಕರ್ತರು ಪ್ರಚೋಧನಾಕಾರಿ ಆಡಿಯೋ ಹಾಗೂ ವಿಡಿಯೋ ವೈರಲ್ ಮಾಡಿದ್ದು ಪೂರಕ ಸಾಕ್ಷಿಯಾಗಿರುತ್ತದೆ. ಅಲ್ಲದೇ, ಈಗಲೂ ಸಹ ಹಿಂದೂ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ಅವರು ನೀಡಿರುವ ದೂರಿನಲ್ಲಿ “ಮಸೀದಿ ಎದುರು ಅನಧಿಕೃತವಾಗಿ ಕೇಸರಿ ಧ್ವಜ ಹಾರಿಸಿ ತಕರಾರು ಮಾಡಲು ಬಂದಿರುತ್ತಾರೆ” ಎಂದು ತಮ್ಮ ದೂರಿನಲ್ಲಿ ಸುಳ್ಳು ಹಾಗೂ ಪ್ರಚೋಧನಾಕಾರಿ ಮಾಹಿತಿಯನ್ನು ನೀಡಿ ಪೋಲೀಸ್ ಇಲಾಖೆಯ ದಿಕ್ಕು ತಪ್ಪಿಸಿ ಅಶಾಂತಿ ಸೃಷ್ಟಿಸುವ ಪ್ರಯತ್ನ ಮಾಡುತ್ತಿರುವುದು ಈ ಮೂಲಕ ಸ್ಪಷ್ಟವಾಗಿ ಕಂಡುಬರುತ್ತಿರುವುದರಿಂದ, ಹಿಂದೂ ಮುಖಂಡರು ಹಾಗೂ ಕಾರ್ಯಕರ್ತರನ್ನು ಗೂಂಡಾ ಎಂದು ಸಂಬೊಂಧಿಸಿ ದೂರು ನೀಡಿರುವ ಎಸ್.ಡಿ.ಪಿ.ಐ ನ ಪದಾಧಿಕಾರಿಗಳಾದ ತೌಫೀಕ್ ಬ್ಯಾರಿ, ವಾಸೀಮ್ ಮನೆಗಾರ್, ಮಕ್ಖುಲ್ ಶೇಖ್, ಅಬ್ದುಲ್ ಶಮಿ ಹಾಗೂ ಕಾರ್ಯಕರ್ತರಾದ ದೇವಿನಗರದ ರಝಾಕ್ ಹುಸೇನ್ ಬ್ಯಾರಿ, ಸೋಪಾ ಶಮಿ, ಮೊಹಮ್ಮದ್ ಕೈಫ್, ಮುಸ್ತಾನ್, ನಾಸಿರ್ ಹಮೀದ್, ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಈ ಮೂಲಕ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ಎಸ್.ಡಿ.ಪಿ.ಐ ನ ಅಣತಿಯ ಮೇರೆಗೆ ಅಶಾಂತಿ ಸೃಷ್ಟಿಸಲು ಪ್ರಚೋಧನಾಕಾರಿ ಆಡಿಯೋ ಮೆಸೆಜ್ಗಳನ್ನು ಹರಿಬಿಟ್ಟ ಎಸ್.ಡಿ.ಪಿ.ಐ ನ ಕಾರ್ಯಕರ್ತರ ವಿರುದ್ಧ ಸಹ ಕಾನೂನು ಕ್ರಮ ಜರುಗಿಸುವಂತೆ ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ. ಅಲ್ಲದೇ, ಕೇವಲ ಮದರಸಾಗೆ ಪರವಾನಿಗೆ ಇದ್ದು ಅವರು ನೀಡಿರುವ ದೂರಿನಲ್ಲಿ ಮದರಸಾವನ್ನು ಮಸೀದಿಯೆಂದು ಉಲ್ಲೇಖಿಸಿ ದೂರು ನೀಡುವ ಮೂಲಕ ಸುಳ್ಳು ಮಾಹಿತಿಯನ್ನು ಪೋಲೀಸ್ ಇಲಾಖೆಗೆ ನೀಡಿರುತ್ತಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸುಬ್ರಾಯ ದೇವಾಡಿಗ, ಕೃಷ್ಣ ನಾಯ್ಕ ಆಸಕರಕೇರಿ, ಶ್ರೀನಿವಾಸ ಹನುಮನಗರ, ಶ್ರೀಕಾಂತ ನಾಯ್ಕ, ಮೋಹನ ನಾಯ್ಕ, ದಯಾನಂದ ನಾಯ್ಕ, ಶ್ರೀನಿವಾಸ ನಾಯ್ಕ ಹಾಗೂ ಮುಂತಾದವರು ಉಪಸ್ಥಿತರಿದ್ದರು.