ಫೈಟರ್ ರವಿ ಸಾರಥ್ಯದಲ್ಲಿ ಹನುಮ ಮಾಲಾಧಾರಿಗಳು ಯಾತ್ರೆ
ನಾಗಮಂಗಲ.ಡಿ:-4 ನಾಗಮಂಗಲದಲ್ಲಿ ಇಂದು ಫೈಟರ್ ರವಿ ಅವರ ಸಾರಥ್ಯದಲ್ಲಿ ಸುಮಾರು 250 ಭಕ್ತಾದಿಗಳು ಹನುಮ ಮಾಲಧಾರೆಗಳನ್ನು ಧರಿಸುವ ಮುಖಾಂತರ ಯಾತ್ರೆಗೆ ಫೈಟರ್ ರವಿ ಅವರು ಚಾಲನೆ ನೀಡಿದರು.
ಅವರು ನಾಗಮಂಗಲದ ಉಪ್ಪರಹಳ್ಳಿಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಇಂದು ವಿಶೇಷ ಪೂಜೆಯೊಂದಿಗೆ ಸುಮಾರು 250 ಭಕ್ತಾದಿಗಳು ಹನುಮ ಮಾಲೆಯನ್ನು ಧರಿಸುವ ಮುಖಾಂತರ ಶ್ರೀರಂಗಪಟ್ಟಣದಲ್ಲಿ ನಡೆಯುವ ಬೃಹತ್ ಯಾತ್ರೆಗೆ ಸಮಾಜ ಸೇವಕರಾದ ಫೈಟರ್ ರವಿ ಅವರು ಚಾಲನೆ ನೀಡಿದರು.
ಶ್ರೀ ಆಂಜನೇಯ ಸ್ವಾಮಿ ದೇವಾಲಯದಿಂದ ಭಕ್ತಾದಿಗಳು ಬೈಕ್ ಮೆರವಣಿಗೆ ಮುಖಾಂತರ ಸಂಕೀರ್ತನ ಯಾತ್ರೆಗೆ ಪಯಣ ಬೆಳೆಸಿದರು.
ಶ್ರೀರಂಗಪಟ್ಟಣದಲ್ಲಿ ಬೃಹತ್ ಸಂಕೀರ್ತನ ಯಾತ್ರೆಯಲ್ಲಿ ಭಾಗವಹಿಸಲು ಮಲ್ಲಿಕಾರ್ಜುನ್ (ಫೈಟರ್ ರವಿ) ಅವರು ಹ ನುಮಮಾಲೆ ಧರಿಸಿ ಭಾಗವಹಿಸಲಿದ್ದಾರೆ.