ಅಥಣಿ ಪೊಲೀಸ ಠಾಣೆಯ ಎ.ಎಸ್.ಐ ರಾಮಲಿಂಗ ನೇಣಿಗೆ ಶರಣು
ಅಥಣಿ-ಬೆಳಗಾವಿ ಜಿಲ್ಲೆಯ ಅಥಣಿ ಪೊಲೀಸ್ ಠಾಣೆಯ ಎಎಸ್ಐ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ನೇಣಿಗೆ ಶರಣಾದ ಎಎಸ್ಐ ರಾಮಲಿಂಗ ನಾಯಕ್ (49) ಎಂದು ತಿಳಿದು ಬಂದಿದೆ.
ಅಳಗವಾಡಿ ಗ್ರಾಮದ ಬೀರೇಶ್ವರ ದೇವಸ್ಥಾನದ ಪಕ್ಕ ಬೈಕ್ ನಿಲ್ಲಿಸಿ ಶೆಡ್ಗೆ ಹೊಂದಿಕೊಂಡಿರುವ ಕಂಬಕ್ಕೆ ನೇಣು ಬಿಗಿದುಕೊಂಡಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಹಾರೂಗೇರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕಾಗಮಿಸಿದ ಹಾರೂಗೇರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.