ಕಾಡು ಔಡಲ ಬೀಜ ಬಾದಮ ಎಂದು ತಿಳಿದು ತಿಂದು 9 ಶಾಲಾ ವಿದ್ಯಾರ್ಥಿಗಳು ಅಸ್ವಸ್ಥ
ಹಾವೇರಿ – ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ನೀರಲಕಟ್ಟಿ ತಾಂಡಾದಲ್ಲಿ ಬಾದಾಮ ಎಂದು ಭಾವಿಸಿ ಕಾಡು ಔಡಲ ಬೀಜ ತಿಂದು 9 ಮಂದಿ ಶಾಲಾ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.
ನೀರಲಕಟ್ಟಿ ತಾಂಡಾದ ಸರ್ಕಾರಿ ಶಾಲೆಯೊಂದರಲ್ಲಿ ಶಾಲೆ ಬಳಿ ಸಿಕ್ಕ ಕಾಡು ಔಡಲ ಬೀಜವನ್ನು ತಿಂದ ಹಿನ್ನೆಲೆಯಲ್ಲಿ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡು ಮಕ್ಕಳು ಅಸ್ವಸ್ಥರಾಗಿದ್ದಾರೆ.
ತಕ್ಷಣ ಮಕ್ಕಳ ಪೋಷಕರು ಅವರನ್ನು ಶಿಗ್ಗಾಂವಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
DYSP ಮಂಜುನಾಥ ಪಿ, CPI ಬಸವರಾಜ ಹಳಬಣ್ಣವರ, PSI ಸಂಪತ್ ಅನಿಕಿವಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.