3 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಲಂಚಬಾಕ ಗ್ರಾಮ ಸಹಾಯಕ
ಚಿಕ್ಕಮಗಳೂರು- ಲಂಚ ಪಡೆಯುತ್ತಿದ್ದ ವೇಳೆ ಗ್ರಾಮ ಸಹಾಯಕನೋರ್ವ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ.
ಗ್ರಾಮ ಸಹಾಯಕ ಶಿವಣ್ಣ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದು, ಹಕ್ಕು ಪತ್ರ ನೀಡಲು 10 ಸಾವಿರ ಹಣ ಲಂಚ ನೀಡುವಂತೆ ಈತ ಬೇಡಿಕೆಯಿಟ್ಟಿದ್ದ.
10 ಸಾವಿರ ಲಂಚ ಕೇಳಿದ್ದ ಈತ ಮುಂಗಡವಾಗಿ 3 ಸಾವಿರ ಈಗಾಗಲೇ ಪಡೆದುಕೊಂಡಿದ್ದ. ಉಳಿದ ಮೊತ್ತವನ್ನು ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆದಿದ್ದಾರೆ.
ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ ಈ ದಾಳಿ ನಡೆದಿದ್ದು, ಲಂಚಬಾಕ ಅಧಿಕಾರಿಗಳಿಗೆ ಈ ದಾಳಿ ಎಚ್ಚರಿಕೆಯ ಕರೆಗಂಟೆಯಾಗಿದೆ.