ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದ ಕಡು ಭ್ರಷ್ಟ ಸರ್ಕಲ್ ಇನ್ಸ್ಟೆಕ್ಟರ್ ವಸಂತ್ ಶಂಕರ್
ಚಿಕ್ಕಮಗಳೂರು-ಲಾರಿಯಲ್ಲಿ ಸಿಮೆಂಟ್ ಜಾಸ್ತಿ ತೆಗೆದುಕೊಂಡು ಹೋಗೋಕೆ ₹10 ಸಾವಿರ ಲಂಚದ ಆರೋಪ ,ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದ ಇನ್ಸ್ಪೆಕ್ಟರ್ ವಸಂತ ಶಂಕರ್ ಭಾಗವತ್”. ನಿಗದಿತ ಲೋಡ್ಗಿಂತಲೂ ಹೆಚ್ಚು ಸಿಮೆಂಟ್ ತುಂಬಿ ಕೊಂಡು ಹೋಗುತ್ತಿದ್ದುದ್ದಕ್ಕೆ , ಲಂಚ ಪಡೆಯುತ್ತಿದ್ದ ಅಧಿಕಾರಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ಧಾರೆ.*
*ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ಪೊಲೀಸ್ ಇನ್ಸ್ಟೆಕ್ಟರ್ ವಸಂತ್ ಶಂಕರ್ ಭಾಗವತ್ ಕರ್ನಾಟಕ ಲೋಕಾಯುಕ್ತ ಪೊಲೀಸ್ ರೇಡ್ನಲ್ಲಿ ಸಿಕ್ಕಿಬಿದ್ದಿರುವ ಅಧಿಕಾರಿ.*
*ಇನ್ಸ್ಪೆಕ್ಟರ್ ವಸಂತ ಅವರು ಈಚೆಗೆ ಸಿಮೆಂಟ್ ಲಾರಿ ತಡೆದು, ಲಾರಿಯಲ್ಲಿ ಮಿತಿಗಿಂತ ಹೆಚ್ಚು ಲೋಡ್ ಇದೆ ಎಂದು ₹10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು.*
*ಈ ಸಂಬಂಧ ಎನ್.ಆರ್. ಪುರದ ಬಸ್ತಿಮಠದ ಸಿಮೆಂಟ್ ಮತ್ತು ಟೈಲ್ಸ್ ವ್ಯಾಪಾರಿ ಎಸ್.ಕೆ.ಮಸ್ತಾನ್ ವಲಿ ಚಿಕ್ಕಮಗಳೂರಿನ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.*