ಕಾಂಗ್ರೆಸ್‍ನವರ ರಕ್ತದಲ್ಲಿ ಅವರ ಡಿಎನ್‍ಎನಲ್ಲೂ ಹಿಂದೂ ವಿರೋಧಿ ಭಾವನೆ ಇದೆ: ಆರ್.ಅಶೋಕ್
ಚಿಕ್ಕಬಳ್ಳಾಪುರ: ಕಾಂಗ್ರೆಸ್‍ನವರ (Congress) ರಕ್ತದಲ್ಲಿ ಅವರ ಡಿಎನ್‍ಎನಲ್ಲೇ (DNA) ಹಿಂದೂ ವಿರೋಧಿ ಭಾವನೆ ಬಂದಿದೆ ಎಂದು ಸತೀಶ್ ಜಾರಕಿಹೊಳಿ (Satish Jarkiholi) ಹಿಂದೂ ಪದದ ಹೇಳಿಕೆ ಸಂಬಂಧ ಕಂದಾಯ ಸಚಿವ ಆರ್.ಅಶೋಕ್ (R.Ashok) ಕಿಡಿಕಾರಿದ್ದಾರೆ.ನೆಹರು ಕಾಲದಿಂದಲೂ ಕಾಂಗ್ರೆಸ್ ಹಿಂದೂ ವಿರೋಧಿ. ಗುಜರಾತ್‍ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಕಟ್ಟಿಸಿದ್ದ ದೇವಸ್ಥಾನ ಒಡೆದಾಗಲೂ ನೆಹರು ಬೆಂಬಲ ನೀಡಲಿಲ್ಲ. ಕಾಂಗ್ರೆಸ್‍ನವರಿಗೆ ಪ್ರತಿದಿನ ಹಿಂದೂಗಳನ್ನು ಬೈಯಲಿಲ್ಲ ಅಂದ್ರೆ ಅವರಿಗೆ ನಿದ್ದೆ ಬರಲ್ಲ. ಕಾಂಗ್ರೆಸ್‍ನವರು ತೋರಿಕೆಗಾಗಿ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರಿಗೆ ಧಮ್ ಇದ್ರೆ ತಾಕತ್ ಇದ್ರೆ ಸತೀಶ್ ಜಾರಕಿಹೊಳಿ ಮೇಲೆ ಕ್ರಮ ಕೈಗೊಳ್ಳಿ ಎಂದು ಸವಾಲು ಹಾಕಿದ್ದಾರೆ.
ಸುರ್ಜೇವಾಲ ಅವರು ಮಾತನಾಡಿ ತಪ್ಪು ಅಂತ ಹೇಳಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಲಿ. ನೋಟಿಸ್ ಕೊಡುವ ಧಮ್, ತಾಕತ್ ಇಲ್ಲ. ಸುಮ್ಮನೆ ಹೇಳಿಕೆ ಕೊಟ್ರೆ ಪ್ರಯೋಜನವಿಲ್ಲ. ಭಾರತೀಯ ಪರಂಪರೆ ಹಿಂದೂ ಧರ್ಮದ ಜೀವನ ಪದ್ಧತಿ ಅಂತ ಸುಪ್ರೀಂಕೋರ್ಟ್ ಸಹ ವ್ಯಾಖ್ಯಾನ ಮಾಡಿದೆ. ಮಲಯಾಳಂ, ತೆಲುಗು ಅಂತ ಬೇರೆ ಬೇರೆ ಭಾಷೆಗಳಲ್ಲಿ ಕನ್ನಡ ಪದ ಬೇರೆ, ಬೇರೆ ಅರ್ಥ ಬರಬಹುದು ಅದಲ್ಲ ಮುಖ್ಯ. ಭಾರತೀಯ ಭಾಷೆಯಲ್ಲಿ ಹಿಂದೂ ಪದಕ್ಕೆ ಪವಿತ್ರವಾದ ಸ್ಥಾನಮಾನವಿದೆ. ಹಿಂದೂ ಧರ್ಮಕ್ಕಾಗಿ ಪ್ರಾಣ ಕೊಡಲು ಕೋಟ್ಯಂತರ ಜನ ಈ ನಾಡಿನಲ್ಲಿ ಬದುಕಿದ್ದಾರೆ. ಇನ್ಮುಂದೆ ಇಂತಹ ಕಿಡಿಗೇಡಿ ಹೇಳಿಕೆ ಕೊಡುವ ಮುನ್ನ ಎಚ್ಚರಿಕೆಯಿಂದಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಮುಸ್ಲಿಮರು ಪ್ರಪಂಚಕ್ಕೆ ಒಬ್ಬರೆ ದೇವರು ಅಂತೆಲ್ಲ ಹೇಳ್ತಾರೆ. ನಮ್ಮ ಧರ್ಮ ಯಾವತ್ತು ಆ ರೀತಿ ಹೇಳಿಲ್ಲ. ನೀವು ಯಾಕೆ ಅವರ ಬಗ್ಗೆ ಎಲ್ಲೂ ಮಾತನಾಡಲ್ಲ. ಸ್ಮಶಾನದಲ್ಲಿ ಹಿಂದೂಗಳನ್ನು ಕರೆದುಕೊಂಡು ಹೋಗಿ ಮದುವೆ ಮಾಡ್ತಿರಲ್ಲ. ಮುಸ್ಲಿಮರನ್ನು ಕಬರ್ ಸ್ಥಾನಕ್ಕೆ ಕರೆದುಕೊಂಡು ಹೋಗಿ ಮದುವೆ ಮಾಡಿ ಅದು ಆಗಲ್ಲ ಯಾಕೆ? ಕ್ರಿಶ್ಚಿಯನ್ನರನ್ನು ಶಿಲುಬೆ ಸಮಾಧಿ ಬಳಿ ಕರೆದುಕೊಂಡು ಹೋಗಿ ಮದುವೆ ಮಾಡಿ ಅದು ಆಗಲ್ಲ. ಹಿಂದೂಗಳನ್ನು ಮಾತ್ರ ಕರೆದುಕೊಂಡು ಹೋಗಿ ಮಾಡ್ತೀರಾ? ಹಿಂದೂಗಳು ಇದೀಗ ಎಚ್ಚೆತ್ತುಕೊಂಡಿದ್ದಾರೆ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸದೃಢವಾಗಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕ ಮುಕ್ತ ಕಾಂಗ್ರೆಸ್ ಆಗಿ ಜನ ಮಾಡ್ತಾರೆ ಅಂತ ಆಕ್ರೋಶ ಹೊರಹಾಕಿದ್ದಾರೆ.
ವರದಿ ಆಕಾಶ್ ಚಲವಾದಿ ಬೆಂಗಳೂರು 9008827439