60 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಫುಡ್ ಇನ್ಸ್ಪೆಕ್ಟರ್
ಭಾಗಲಕೋಟೆ -60 ಸಾವಿರ ಲಂಚದ ಹಣ ಸ್ವೀಕರಿಸುತ್ತಿರುವಾಗ ಆಹಾರ ಇಲಾಖೆ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಮಂಗಳವಾರ ರಾತ್ರಿ ಬಾಗಲಕೋಟೆಯಲ್ಲಿ ನಡೆದಿದೆ.
ಈರಯ್ಯ ಕೋಟಿ ಬಾಗಲಕೋಟೆ
ಆಹಾರ ನಿರೀಕ್ಷಕರು ಆಹಾರ ವಿಭಾಗ ಹಾಗೂ ಮಲ್ಲಿಕಾರ್ಜುನ ಹವರಗಿ ಲೋಕಾಯುಕ್ತರ ಬಲೆಗೆ ಬಿದ್ದಿದವರು,
ವಿದ್ಯಾಗಿರಿಯ 7 ನೇ ಕ್ರಾಸ್ ನಲ್ಲಿರುವ ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಲಂಚದ ಹಣಕ್ಕೆ ಬೇಡಿಕೆ ಇಟ್ಟದ್ದ ಅಧಿಕಾರಿ.
ಅಮಾನತುಗೊಂಡಿರುವ ಪಡಿತರ ಅಂಗಡಿ ಪರವಾನಿಗಿ ಮುಂದುವರಿಸಲು 60,ಸಾವಿರ ರೂ.ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು,ಇದನ್ನ ಪುನ ಆರಂಭಿಸಲು ಸುರೇಶ ಗಡಗಡೆ ಎಂಬುವವರಿಂದ 60 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು,ಈ ಕುರಿತು ಬಾಗಲಕೋಟೆ ಲೋಕಾಯುಕ್ತ ಪೊಲೀಸರಿಗೆ ದೂರ ನೀಡಿದ ಸುರೇಶ ಗಡಗಡೆ,60,000 ಲಂಚದ ಹಣ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಈ ವೇಳೆ ಲೋಕಾಯುಕ್ತ ಎಸ್.ಪಿ. ಶಂಕರ ರಾಗಿ ಅವರ ಮಾರ್ಗದರ್ಶನದಲ್ಲಿ ಬಾಗಲಕೋಟೆ ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ.ಎನ್ ಅವರ ನೇತೃತ್ವದಲ್ಲಿ ಸಿಪಿಐಗಳಾದ ಎಂ.ಎಚ್.ಬಿದರಿ, ಬಸಗೌಡ.ಜೇ. ಪಾಟೀಲ ಹಾಗೂ ಸಿಬ್ಬಂದಿಗಳಾದ ಬಸವರಾಜ ದೇಸಾಯಿ, ನಾಗಪ್ಪ ಪೂಜಾರಿ, ಹಣಮಂತ ಮಾಸರಡ್ಡಿ, ಭೀಮನಗೌಡ ಪಾಟೀಲ, ಶಂಕರ ಬಳಬಟ್ಟಿ, ಮಂಜುನಾಥ ದೇಸಾಯಿ, ಸಿದ್ದು ಮುರನಾಳ, ಹಣಮಂತ ಹಲಗತ್ತಿ, ಮುಸ್ಟಿಗೆರಿ, ರಾಮನಗೌಡ ಗೌಡರ, ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು ತನಿಖೆ ಪ್ರಕ್ರಿಯೆಯು ಮುಂದುವರೆದಿರುತ್ತದೆ.