ಡಿ. ೧೭ ರಂದು ಶಿರಸಿಯಲ್ಲಿ ಅರಣ್ಯವಾಸಿಗಳ ರ‍್ಯಾಲಿ;
ಸೋಮವಾರ ಮುಂಡಗೋಡದಲ್ಲಿ ಯಶಸ್ವಿ ಜಾಗೃತ ಪಥ ಸಂಚಲನ ನಡೆಯಿತು
ಮುAಡಗೋಡ: ಶಿರಸಿಯಲ್ಲಿ ಡಿಸೆಂಬರ್ ೧೭ ರಂದು ಜರಗುವ ಅರಣ್ಯವಾಸಿಗಳನ್ನ ಉಳಿಸಿ ಜಾಥದ ಪೂರ್ವಭಾವಿಯಾಗಿ ಸೋಮವಾರ ಮುಂಡಗೋಡದಲ್ಲಿ ಬೃಹತ್ ಅರಣ್ಯವಾಸಿಗಳ ಜಾಗೃತ ರ‍್ಯಾಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತ್ರತ್ವದಲ್ಲಿ ಜರುಗಿತು.
ಅರಣ್ಯ ಭೂಮಿ ಹಕ್ಕಿಗಾಗಿ ಸರಕಾರದ ಮೇಲೆ ಹಾಗೂ ಜನಪ್ರತಿನಿಧಿಗಳ ಮೇಲೆ ಒತ್ತಡ ತರುವ ಹಿನ್ನೆಲೆಯಲ್ಲಿ ಹಾಗೂ ಅರಣ್ಯವಾಸಿಗಳ ಜಾಗೃತೆ ಮೂಡಿಸುವ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾದ ಅರಣ್ಯವಾಸಿಗಳ ಪಥ ಸಂಚಲನವು ಯಶಸ್ವಿಯಾಗಿ ಸಂಪನ್ನಗೊAಡಿತು.
ಪಥ ಸಂಚಲನದ ಅಧ್ಯಕ್ಷತೆಯನ್ನ ತಾಲೂಕ ಅಧ್ಯಕ್ಷ ಶಿವಾನಂದ ಜೋಗಿ ವಹಿಸಿದ್ದರು. ದುರ್ಗಪ್ಪ ಭಜಂತ್ರಿ, ಜಗದೀಶ್ ಕೋಡಂಬಿ, ಜಗದೀಶ್ ಶೆಟ್ಟಿ, ವಿರಭದ್ರ ಗಳಗಿ, ನಿಸಾರ್‌ಅಹಮ್ಮದ್ ಮುಂತಾದವರು ಉಪಸ್ಥಿತರಿದ್ದರು.
ಐದು ಪ್ರಮುಖ ಬೇಡಿಕೆಗಳು:
ಅರಣ್ಯವಾಸಿಗಳ ಪರವಾಗಿ ಸುಫ್ರೀಂ ಕೋರ್ಟನಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸುವುದು, ಅಸಮರ್ಪಕ ಜಿಪಿಎಸ್ ಮೇಲ್ಮನವಿ ಪುನರ್ ಸರ್ವೇಗೆ ಆದೇಶ ಮಾಡುವುದು, ಅರಣ್ಯ ಸಿಬ್ಬಂದಿಗಳಿAದ ಉಂಟಾಗುತ್ತಿರುವ ದೌರ್ಜನ್ಯ, ಕಿರುಕುಳ ನಿಯಂತ್ರಿಸುವುದು,೧೯೭೮ ರ ಪೂರ್ವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರಕಾರದಿಂದ ಅರಣ್ಯೇತರ ಚಟುವಟಿಕೆಗೆ ಬಿಡುಗಡೆ ಮಾಡಿದ ೨,೫೧೩ ಕುಟುಂಬಗಳಿಗೆ ಜಿಲ್ಲೆಯಲ್ಲಿ ೬,೧೫೬ ಹಂಗಾಮಿ ಲಾಗಣಿದಾರರಿಗೆ ಖಾಯಂ ಮಂಜೂರಿ ಹಕ್ಕು ಪತ್ರ ನೀಡುವುದು, ಅರಣ್ಯ ಹಕ್ಕು ಕಾಯಿದೆ ಉಲ್ಲೇಖದಂತೆ, ಗುಜರಾತ್ ಉಚ್ಛ ನ್ಯಾಯಾಲಯದ ಆದೇಶದಂತೆ ಹಾಗೂ ಕೇಂದ್ರ ಸರಕಾರದ ಬುಡಕಟ್ಟು ಮಂತ್ರಾಲಯದ ದಿ. ೧೨ ಸಪ್ಟೆಂಬರ್ ೨೦೧೪ ರ ನಿರ್ಧೇಶನದಂತೆ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಭೂಮಿ ಹಕ್ಕಿಗೆ ನಿರ್ದಿಷ್ಠ ದಾಖಲೆಗಳಿಗೆ ಒತ್ತಾಯಿಸದೇ ಮಂಜೂರಿ ನೀಡುವ ಕ್ರಮ ಜರುಗಿಸುವ ಸಮಸ್ಯೆಗಳನ್ನ ಈಡೇರಿಸುವ ಹಿನ್ನೆಲೆಯಲ್ಲಿ ಶಿರಸಿಯಲ್ಲಿ ರ‍್ಯಾಲಿ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.