ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ವೆಲ್ಫರ್ ಪಾರ್ಟಿ ಎಂ.ಎಲ್.ಎ ಅಭ್ಯರ್ಥಿಯಾಗಿ ಭಟ್ಕಳದ ಆಸಿಫ್ ಶೇಖ್ ಘೋಷಣೆ
ಭಟ್ಕಳ: ಮುಂಬರುವ ರಾಜ್ಯದ ವಿಧಾನಸಭಾ ಚುನಾವಣೆಗಾಗಿ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸೀಫ್ ಶೇಖ್ ವೆಲ್ಫೇರ್ ಪಾರ್ಟಿಯಿಂದ ಅಭ್ಯರ್ಥಿಯಾಗಲಿದ್ದಾರೆ ಎಂದು ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಘೋಷಿಸಿದರು.
ಅವರು ಬುಧವಾರ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯನ್ನು ನಡೆಸಿದ್ದು ಒಮ್ಮತದ ಅಭ್ಯರ್ಥಿಯನ್ನಾಗಿ ಆಸೀಫ್ ಶೇಖ್ ರ ಹೆಸರನ್ನು ಅಂತಿಮಗೊಳಿಸಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ವೆಲ್ಫೇರ್ ಪಾರ್ಟಿ ಮೌಲ್ಯಧಾರಿತ ರಾಜಕಾರಣಕ್ಕಾಗಿ ರಾಜ್ಯದ ಹಲವು ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ. ಭಟ್ಕಳ ಕ್ಷೇತ್ರದಲ್ಲಿ ಪ್ರಥಮವಾಗಿ ಅಭ್ಯರ್ಥಿಯ ಘೋಷಣೆಯಾಗಿದೆ ಎಂದರು. ರಾಜಕೀಯದ ಹೆಸರಲ್ಲಿ ಇಂದು ದೊಂಬರಾಟ ನಡೆಯುತ್ತಿದ್ದು ಜನರು ಆಯ್ಕೆ ಮಾಡಿ ಕಳುಹಿಸಿದ ಅಭ್ಯರ್ಥಿಗಳು ಜನರ ಸಮಸ್ಯೆಗಳನ್ನು ಮರೆತು ಜಾತಿ ಧರ್ಮದ ಹೆಸರಲ್ಲಿ ಕಚ್ಚಾಟ ನಡೆಸುತ್ತಿದ್ದಾರೆ. ವೆಲ್ಫೇರ್ ಪಾರ್ಟಿ ರಾಜಕೀಯಕ್ಕೆ ಅಂಟಿದ ಈ ಕಳಂಕವನ್ನು ದೂರ ಮಾಡಲು ೨೦೧೧ರಿಂದ ನಿರಂತರವಾಗಿ ಮೌಲ್ಯಧಾರಿತ ರಾಜಕಾರಣ ಮಾಡುತ್ತಿದೆ. ಒಂದು ಪಕ್ಷದಿಂದ ಗೆದ್ದು ಮತ್ತೊಂದು ಪಕ್ಷಕ್ಕೆ ಪಲಾಯನ ರಾಷ್ಟಿçÃಯ ಪಕ್ಷಗಳನ್ನು ಜನರು ತಿರಸ್ಕರಿಸಿ ಉತ್ತಮ ಆಡಳಿತ ನೀಡುವ ವೆಲ್ಫೇರ್ ಪಾರ್ಟಿಯನ್ನು ಹೆಚ್ಚಿನ ಬಹುಮಾತದಿಂದ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಆಸೀಫ್ ಶೇಖ್ ಜನಪರ ಹೋರಾಟಗಾರನಾಗಿದ್ದು ಜನರ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ. ಭಟ್ಕಳದಲ್ಲಿ ಎಲ್ಲ ರೀತಿಯ ಸಮಸ್ಯೆಗಳ ಕುರಿತು ಅವರು ಗಂಭೀರವಾಗಿ ಚಿಂತಿಸುತ್ತಾರೆ. ಇಂತಹ ವ್ಯಕ್ತಿಯನ್ನು ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಮತದಾರರು ಆಯ್ಕೆ ಮಾಡಿ ಕಳುಹಿಸುತ್ತಾರೆ ಎಂದ ಅವರು ಜನಬಲ ಹಣಬಲದ ನಡುವೆ ನಮ್ಮ ಅಭ್ಯರ್ಥಿ ಮೌಲ್ಯಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕೋಮುವಾದಿ ಫ್ಯಾಸಿಸ್ಟ್ ಶಕ್ತಿಗಳನ್ನು ಇಂದು ಜನರು ದೂರ ಇಡುತ್ತಿದ್ದಾರೆ. ಜಾತ್ಯತೀತೆಯ ಸೋಗಿನಲ್ಲಿ ಕಾಂಗ್ರೇಸ್ ಏನೆಲ್ಲ ಮಾಡುತ್ತಿದೆ ಎಂಬುದು ಜನರಿಗೆ ತಿಳಿದಿದೆ. ಆದ್ದರಿಂದ ಈ ಬಾರಿ ಖಂಡಿತವಾಗಿಯೂ ಜನರು ವೆಲ್ಫೇರ್ ಪಾರ್ಟಿಯ ಅಭ್ಯರ್ಥಿಯನ್ನು ಆಶೀರ್ವದಿಸುತ್ತಾರೆ ಎಂದು ಹೇಳಿದರು. ಕಾಂಗ್ರೇಸ್ ಮೇಲಿನ ಭರವಸೆಯಿಂದ ಜನರು ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಕಳೆದ ಬಾರಿ ೧೭ಕ್ಕೂ ಹೆಚ್ಚು ಮಂದಿ ಕಾಂಗ್ರೇಸ್ ಶಾಸಕರು ಬಿಜೆಪಿಯನ್ನು ಅಪ್ಪಿಕೊಂಡರು. ಆದ್ದರಿಂದ ಜನರಿಗೆ ಕಾಂಗ್ರೇಸ್ ಮೇಲಿನ ವಿಸ್ವಾಸವನ್ನು ಕಳೆದುಕೊಂಡಿದ್ದಾರೆ. ಈಗ ಸಣ್ಣಪಕ್ಷಗಳ ಕಡೆಗೆ ಅವರು ಮುಖ ಮಾಡಿದ್ದಾರೆ. ವೆಲ್ಫೇರ್ ಪಾರ್ಟಿಗೆ ಈ ಬಾರಿ ರಾಜ್ಯದಲ್ಲಿ ಉತ್ತಮ ವಾತವರಣವಿದೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಫಾರೂಖ್ ಮಾಸ್ಟರ್, ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ ಅಸದಿ, ರಾಜ್ಯ ಮಾಧ್ಯಮ ಕಾರ್ಯದರ್ಶಿ ಅಬ್ದುಲ್ ಅಝೀಜ್ ಜಾಗರ್ದಾರ್, ಮುಖಂಡರಾದ ಅಬ್ದುಲ್ ಮಾಜಿದ ಕೋಲಾ ಮತ್ತಿತರರು ಉಪಸ್ಥಿತರಿದ್ದರು.