ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಎಂ.ಎಲ್.ಎ ಟಿಕೆಟ್ ಪ್ರಬಲ ಆಕಾಂಕ್ಷಿ ಶ್ರೀಧರ ನಾಯ್ಕ ಕೈಕಿಣಿ
ಭಟ್ಕಳ- ಯುವಕರ ಆಶಾಕಿರಣ , ಕಾಂಗ್ರೆಸ್ ಮುಖಂಡ ಶ್ರೀಧರ ನಾಯ್ಕ ಕೈಕಿಣಿ ಅವರು 2023 ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧೆ ಮಾಡಲು ಬಯಸಿ ಭಟ್ಕಳ -ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಎಂ.ಎಲ್.ಎ
ಟಿಕೆಟಗಾಗಿ ಪಕ್ಷದ ವರಿಷ್ಠರಿಗೆ ನಿಯಮದಂತೆ ಅರ್ಜಿ ಸಲ್ಲಿಸಿದ್ದಾರೆ.
ಶ್ರೀಧರ ನಾಯ್ಕ ಕೈಕಿಣಿ ಅವರು ಹಾಲಿ ಕೈಕಿಣಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ
ನಿಷ್ಠಾವಂತ ಕಾರ್ಯಕರ್ತರಾಗಿದ್ದು , ಕಳೆದ 22 ವರುಷಗಳಿಂದ ಪಕ್ಷಾಂತರ ಮಾಡದೆ ಕಾಂಗ್ರೆಸ್ ಪಕ್ಷದಲಿದ್ದಾರೆ. ಇವರು ಕಾಂಗ್ರೆಸ್ ಪಕ್ಷದ ಸರ್ವೋಚ್ಚ ನಾಯಕರಾದ ದಿ.ಇಂದಿರಾಗಾಂಧಿ , ದಿ.ರಾಜೀವ್ ಗಾಂಧಿ, ಮಾಜಿ ಮುಖ್ಯಮಂತ್ರಿ ಗಳಾದ ದೇವರಾಜ ಅರಸು, ಬಂಗಾರಪ್ಪ ನವರ ಆದರ್ಶ, ಕಾರ್ಯವೈಖರಿ ಮತ್ತು ರಾಜಕೀಯ ನಡೆಯನ್ನು ಮೇಚ್ಚಿ ಕಾಂಗ್ರೆಸ್ ಅಭಿಮಾನಿಯಾಗಿ 2001-02 ನೆ ಸಾಲಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಾಗಿ ಕಾಂಗ್ರೆಸ್ ಪಕ್ಷ ಸೇರಿರುತ್ತಾರೆ. ಇವರ ಪಕ್ಷ ನಿಷ್ಠೆ ಮತ್ತು ಅಂದಿನ ಕಾರ್ಯ ವೈಖರಿ ಕಂಡು 2002-03 ರಲ್ಲಿ ಅಂದಿನ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ನಾರ್ವೆಕರ ಅವರು ಶ್ರೀಧರ್ ನಾಯ್ಕ ಅವರಿಗೆ ಜಿಲ್ಲಾ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನೀಡಿರುತಾರೆ. ಕೊಟ್ಟ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ ಸೈಎನಿಸಿಕೊಂಡಿರುತ್ತಾರೆ.
ಇವರು ತನ್ನ ಸ್ವಂತ ಶಕ್ತಿ ಮೇಲೆ 2010-2020 ರ ವರೆಗೆ ಸತತವಾಗಿ 3 ಬಾರಿ ಗ್ರಾಮ ಪಂಚಾಯತ ಸದಸ್ಯರಾಗಿ ಆಯ್ಕೆ ಆಗುವುದರ ಜೊತೆಗೆ ಹಲವಾರು ಸದಸ್ಯರನ್ನು ಗೆಲ್ಲಿಸಿಕೊಂಡು ಬಂದಿರುತ್ತಾರೆ. ಇವರು 2020-21 ರ ಕೋವಿಡ್ ಸಂಕಷ್ಟ ಪರಿಸ್ಥಿತಿ ಸಂದರ್ಭದಲ್ಲಿ ತಮ್ಮ ಕ್ಷೇತ್ರದ ಸಾವಿರಾರು ಜನರಿಗೆ ಆಹಾರದ ಕಿಟ್ ಹಾಗೂ ಹಣಕಾಸು ಸಹಾಯ ಸಹಕಾರ ನೀಡಿದ್ದಾರೆ.
ಶಿಧರ ನಾಯ್ಕ ಕೈಕಿಣಿ ಅವರು ಸತತ 22 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಪ್ರಾಮಾಣಿಕ ನಿಷ್ಠಾವಂತ ಕಾರ್ಯಕರ್ತರಾಗಿ, ಯಾವುದೇ ಪ್ರತಿಪಾಲಾಪೇಕ್ಷೆ ಇಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದಾರೆ. 2004 ,2009, 2013ರ ವಿಧಾನಸಭಾ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್ ಪಕ್ಷದ ಅಬ್ಯರ್ಥಿ ಜೆ.ಡಿ.ನಾಯ್ಕರ ಪರವಾಗಿ ಪಕ್ಷ ನಿಷ್ಠೆಯಿಂದ ಕಾರ್ಯ ನಿರ್ವಹಿಸಿರುತ್ತಾರೆ. 2018 ರಲ್ಲಿ ಅಂದಿನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಂಕಾಳ ವೈದ್ಯ ಅವರ ಪರ ಪ
ಪ್ರಾಮಾಣಿಕವಾಗಿ ಪಕ್ಷ ನಿಷ್ಠೆಯಿಂದ ಕಲಸ ಮಾಡಿರುತ್ತಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಬ್ಯರ್ಥಿ ಪರ ಪಕ್ಷ ನಿಷ್ಠೆಯಿಂದ ದುಡಿದಿರುತ್ತಾರೆ.ಸದ್ಯ ಪ್ರಸ್ತಕ ವರ್ಷ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಮಾಡಿಸುವ ವಿಚಾರದಲ್ಲಿ 5000 ಕಾಂಗ್ರೆಸ್ ಸದಸ್ಯತ್ವ ಮಾಡಿಸಿ, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರಿಂದ ಬಹುಮಾನ ಪಡೆದುಕೊಂಡಿರುತ್ತಾರೆ. ಸದ್ಯ ಕಳೆದ ಹಲವಾರು ತಿಂಗಳುಗಳಿಂದ ಶ್ರೀಧರ್ ನಾಯ್ಕ ಕೈಕಿಣಿ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು, ಕಾಂಗ್ರೆಸ್ ಕಾರ್ಯಕರ್ತರ ಪಡೆ ಕಟ್ಟಿಕೊಂಡು ಭಟ್ಕಳ-ಹೊನ್ನವಾರ ವಿಧಾನ ಸಭಾ ಕ್ಷೇತ್ರದಾದ್ಯಂತ ಧಾನ , ಧರ್ಮಗಳನ್ನು ಮಾಡುತ್ತ , ಬಡವರಿಗೆ ಸಹಾಯ ಸಹಕಾರ ನೀಡುತ್ತಾ ಸಭೆ , ಸಮಾರಂಭಗಳಲ್ಲಿ ಭಾಗವಹಿಸುತ್ತ ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ಬಿಡುವಿಲ್ಲದೆ ತೊಡಗಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ತಮ್ಮ ಪಕ್ಷ ನಿಷ್ಠೆ , ಪ್ರಾಮಾಣಿಕತನ ಮತ್ತು ಸತತ 22 ವರುಷಗಳ ನಿರಂತರ ಕಾಂಗ್ರೆಸ್ ಪಕ್ಷದ ಸೇವೆಯನ್ನು ಪರಿಗಣಿಸಿ ತನಗೆ ಈ ಭಾರಿ ಭಟ್ಕಳ -ಹೊನ್ನವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಎಂ.ಎಲ್.ಎ ಟಿಕೆಟ್ ನೀಡಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಒಬ್ಬರು ಮಾಜಿ ಸಚಿವರು ಮತ್ತು ಇಬ್ಬರು ಮಾಜಿ ಶಾಸಕರು ಸೇರಿದಂತೆ ಹಲವರು ಅರ್ಜಿ ಸಲ್ಲುಸಿರುತ್ತಾರೆ, ಪಕ್ಷ ಯಾರಿಗೆ ಮಣೆ ಹಾಕಲಿದೆ ಕಾದು ನೋಡಬೇಕು.