ಅಂಕೋಲಾ ಬಸ್ ನಿಲ್ದಾಣದಲ್ಲಿ ಇಂದು ಬೆಳ್ಳಿಗೆ 2 ಜನ ಮಹಿಳೆಯರ ನಡುವೆ ಡಿಶುಮ್ ಡಿಶುಮ್ ಫೈಟಿಂಗ್
ಅಂಕೋಲಾ-ಅಂಕೋಲಾ ಬಸ್ ನಿಲ್ದಾಣದಲ್ಲಿ ದಿನಾಂಕ್ 15/02/2024. ಬೆಳಿಗ್ಗೆ 10:30 ಗಂಟೆಗೆ.ಯಾವುದೋ ಕಾರಣಕ್ಕೆ ಮಹಿಳೆಯರಿಬ್ಬರು ಹೊಡೆದಾಡಿಕೊಂಡ ಘಟನೆ ನಡೆದಿದೆ.
ಆ ಮಹಿಳೆಯರಿಬ್ಬರು ಅಕ್ಕ ತಂಗಿಯರು ಎಂದು ಹೇಳಲಾಗುತ್ತಿದ್ದು . ನಡೆಯುತ್ತಿದ್ದ ಜಗಳವನ್ನು ಬಿಡಿಸಲು ಹೋದ ಬಸ್ಸಿನ ನಿರ್ವಾಹಕೀಯ ಮೇಲೆ ಯೇ ಒಬ್ಬಾಕೆ ಮಹಿಳೆ ಹಲ್ಲೆಗೆ ಮುಂದಾಗುತ್ತಿದ್ದಳು.
ಈ ಸನ್ನಿವೇಶವನ್ನು ನೋಡಲು ತಮ್ಮ ತಮ್ಮ ಕೆಲಸವನ್ನು ಬಿಟ್ಟು ಜನ ಬಸ್ ನಿಲ್ದಾಣದಕ್ಕೆ ಓಡೋಡಿ ಬಂದರು. ಮಹಿಳೆಯರು ಯಾವ ಕಾರಣಕ್ಕಾಗಿ ಜಗಳ ಆಡುತ್ತಿದ್ದಾರೆ ಎಂಬ ಕಾರಣವನ್ನು ತಿಳಿಯದೆ ಮೂಕ ಪ್ರೇಕ್ಷಕರಾಗಿ ಅಕ್ಕ-ತಂಗಿಯರು ಡಿಶುಮ್ ಡಿಶುಮ್ ಮಾಡುತ್ತಿರುವುದನ್ನು ನೋಡುತ್ತಿದ್ದರು…. ಕೊನೆಗೆ ಜನರು ಹೆಚ್ಚಾಗಿ ಸೇರುತ್ತಿದ್ದಂತೆ ಆ ಮಹಿಳೆಯರು ಬಸ್ ನಿಲ್ದಾಣದಿಂದ ಕಾಲ್ಕಿತ್ತಿದ್ದಾರೆ.