ಭಟ್ಕಳ ಬಿಜೆಪಿ ಮಂಡಲ ವತಿಯಿಂದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತ ದಿ. ಸಚಿನ್ ಮಹಾಲೆ ಅವರ ಶ್ರದ್ಧಾಂಜಲಿ ಕಾರ್ಯಕ್ರಮ
ಭಟ್ಕಳ- ಜೂನ್ 11 ಅನಾರೋಗ್ಯದಿಂದ ಅಕಾಲಿಕ ಮರಣ ಹೊಂದಿದ ಭಟ್ಕಳ ಬಿಜೆಪಿಪಕ್ಷದ ಸಂಘಟನೆ ಹಾಗೂ ಪಕ್ಷದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಪಕ್ಷದ *ನಿಷ್ಠಾವಂತ ಕಾರ್ಯಕರ್ತ ದಿ. ಸಚಿನ್ ಮಹಾಲೆ ಅವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು* ಇಂದು ಭಟ್ಕಳದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಭಟ್ಕಳ ಬಿಜೆಪಿ ಮಂಡಲ ವತಿಯಿಂದ ಇಂದು ನಡೆಯಿತು.. ಮೊದಲಿಗೆ ಸಚಿನ್ ಮಹಾಲೆಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಒಂದು ನಿಮಿಷದ ಮೌನಾಚರಣೆಯನ್ನು ಮಾಡಲಾಯಿತು.
ಆನಂತರ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾದ ಶ್ರೀ ಸುಬ್ರಾಯ ದೇವಾಡಿಗ ಅವರು ಮಾತನಾಡಿ ಸಚಿನ್ ಮಹಾಲೆ ಅವರೊಂದಿಗಿನ ಒಡನಾಟ, ಪಕ್ಷದ ಕಾರ್ಯಚಟುವಟಿಕೆಯಲ್ಲಿ ಅವರ ಪಾತ್ರ ಹಾಗೂ ಪಕ್ಷಕ್ಕಾಗಿ ದುಡಿದ ಅವರ ಶ್ರಮ ಎಲ್ಲವನ್ನು ಸವಿಸ್ತಾರವಾಗಿ ವಿವರಿಸಿ, ಅನಾರೋಗ್ಯ ಇದ್ದಾಗ ಅವರನ್ನು ವಿಚಾರಿಸುವಲ್ಲಿ ಪಕ್ಷ ಎಡವಿದ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಮಾಜಿ ಶಾಸಕರಾದ ಶ್ರೀ ಸುನೀಲ್ ಬಿ. ನಾಯ್ಕ , ಪ್ರಮುಖರಾದ ಶ್ರೀ ಗೋವಿಂದ ನಾಯ್ಕ , ಶ್ರೀ ಶ್ರೀಕಾಂತ ನಾಯ್ಕ , ಶ್ರೀ ಈಶ್ವರ ನಾಯ್ಕ, ಶ್ರೀಮತಿ ಶಿವಾನಿ ಶಾಂತರಾಮ್, ಶ್ರೀ ದತ್ತಾತ್ರೇಯ ನಾಯ್ಕ, ಶ್ರೀ ಗೋವರ್ಧನ ನಾಯ್ಕ, ಶ್ರೀ ಕೃಷ್ಣ ನಾಯ್ಕ, ಮಂಡಲ ಅಧ್ಯಕ್ಷರಾದ ಶ್ರೀ ಲಕ್ಷ್ಮೀನಾರಾಯಣ ನಾಯ್ಕ ಮೊದಲಾದವರು ಮಾತನಾಡಿ ಸಚಿನ್ ಮಹಾಲೆಯವರ ಪಕ್ಷ ನಿಷ್ಠೆ, ಪ್ರಾಮಾಣಿಕತೆ, ಒಡನಾಟ, ಹಾಗೂ ಕಾರ್ಯ ಚಟುವಟಿಕೆಗಳನ್ನು ನೆನೆದು ಭಾವುಕರಾದರು.
ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರು, ಮಂಡಲ ಹಾಗೂ ಜಿಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು..