ಕುಮಟ: ಇತ್ತೀಚಿನ ದಿನಗಳಲ್ಲಿ ಅರಣ್ಯವಾಸಿಗಳ ಮೇಲೆ ಕಾನೂನು ಭಾಹಿರವಾಗಿ ಅರಣ್ಯ ಸಿಬ್ಬಂದಿಗಳು ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಆತಂಕ ಮತ್ತು ಕಿರುಕುಳ ನೀಡುವ ಹಿನ್ನಲೆಯಲ್ಲೆ, ಹಿರಿಯ ಅರಣ್ಯ ಅಧಿಕಾರಿಗಳ ಕ್ಷವi-ಕ್ಷವi ಅರಣ್ಯವಾಸಿಗಳ ತೀವ್ರ ಆಕ್ರೋಶ ಪ್ರಶ್ನಾವಳಿಗಳು ವ್ಯಕ್ತವಾದವು.
ಕುಮಟ ತಾಲೂಕಿನ ಅರಣ್ಯ ಸಹಾಯಕ ಸಂರಕ್ಷಣಾ ಅಧಿಕಾರಿ ಕಛೇರಿ ಆವರಣದಲ್ಲಿ ಅರಣ್ಯ ಸಹಾಯಕ ಅಧಿಕಾರಿಗಳು ಲೋಕೇಶ ಅವರ ಕ್ಷವi, ಕ್ಷವiದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಇಂದು ಜರುಗಿದ ಸಭೆಯಲ್ಲಿ ಮೇಲಿನ ಘಟನೆಗಳು ಜರುಗಿದ್ದವು.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ, ಅರ್ಜಿ ಪುನರ್ ಪರಿಶೀಲನಾ ಹಂತದಲ್ಲಿ ಇರುವ, ಜಿಫಿಎಸ್ ಮೇಲ್ಮನವಿ ಉರ್ಜಿತ ಇರುವ ಸಂದರ್ಭದಲ್ಲಿ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಅರಣ್ಯ ಸಿಬ್ಬಂದಿಗಳಿAದ ಆತಂಕ ಉಂಟಾಗುವ ಹಿನ್ನಲೆಯಲ್ಲಿ ಅರಣ್ಯ ಅಧಿಕಾರಿಗಳಿಂದ ಲಿಖಿತ ಉತ್ತರ ನೀಡಲು ಅರಣ್ಯವಾಸಿಗಳು ಪಟ್ಟು ಹಿಡಿದ ಹಿನ್ನಲೆಯಲ್ಲಿ ಹೊನ್ನಾವರ ಡಿ.ಎಫ್.ಒ ಯೋಗೇಶ ಇವರು ಒಂದು ವಾರದಲ್ಲಿ ಲಿಖಿತ ಉತ್ತರ ನೀಡುವ ಭರವಸೆಯೊಂದಿಗೆ ಸಭೆ ಮುಕ್ತಾಯವಾಯಿತು.
ಸಭೆಯಲ್ಲಿ ಅರಣ್ಯ ಅಧಿಕಾರಿಗಳಾದ ವಲಯ ಅರಣ್ಯ ಅಧಿಕಾರಿಗಳಾದ ವಿನೋದ ನಾಯ್ಕ, ಪ್ರೀತಿ ನಾಯ್ಕ, ರಾಜೀವ ನಾಯಕ ಉಪಸ್ಥಿತರಿದ್ದರು.
ತಾಲೂಕಾದ್ಯಂತ ಸೇರಿದ ಬೃಹತ್ ಅರಣ್ಯವಾಸಿಗಳ ಸಭೆಯಲ್ಲಿ ರಂಜಿತಾ ರವೀಂದ್ರ, ಗಜಾನನ ಹೆಗಡೆ, ಯಾಕುಬ ಸಾಬ, ಮಹೇಂದ್ರ ನಾಯ್ಕ ಕತಗಾಲ, ರೈತ ಹೋರಾಟಗಾರ ಮುಖಂಡ ವೀರಭದ್ರ ನಾಯ್ಕ, ರಾಘವೇಂದ್ರ ಕಂವಚೂರು, ಶುಕುರ್ ಸಾಬ, ಸೀತರಾಮ ನಾಯ್ಕ ಬುಗರಿಬೈಲ್ ಚರ್ಚೆಯಲ್ಲಿ ಭಾಗವಹಿಸಿದ್ದರು. ಅಬ್ದುಲ್ ಶುಕುರ್, ಸದಾನಂದ ಹರಿಕಾಂತ, ಜಗದೀಶ ನಾಯ್ಕ, ಅರವೀಂದ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಹೆಂಗಸರು ಇದ್ದಾಗ ಒಕ್ಕಲೇಬ್ಬಿಸುವುದ್ಯಾಕೇ: ರಂಜಿತಾ ರವೀಂದ್ರ.
ಅತಿಕ್ರಮಣದಾರರು ಗಂಡಸರು ಮನೆಯಲ್ಲಿ ಇಲ್ಲದಿದ್ದಾಗ ಬೇಲಿ ಕೀಳುವುದು, ಗಿಡ ಕಿತ್ತುವÀ ಕಾರ್ಯ ಮಾಡುತ್ತಾರೆ. ನೋಟೀಸ್ ಕೊಡುವುದಿಲ್ಲ, ಅವಕಾಶವು ನೀಡುವುದಿಲ್ಲ. ಹೆಂಗಸರಷ್ಟೇ ಇದ್ದಾಗ ಅರಣ್ಯ ಸಿಬ್ಬಂದಿಗಳು ಒಕ್ಕಲೇಬ್ಬಿಸುವ ಪ್ರಕ್ರಿಯೆ ಜರುಗಿಸುವದು ಯಾಕೆ? ಎಂಬ ಪ್ರಶ್ನೇ ಹೋರಾಟಗಾರರ ವೇದಿಕೆಯ ಸಂಚಾಲಕಿ ರಂಜಿತಾ ರವೀಂದ್ರ ಇನ್ನಿತರ ಮಹಿಳೆಯರೊಂದಿಗೆ ಧ್ವನಿಗುಡಿಸಿದರು.