ಭಟ್ಕಳ-ಕೇಂದ್ರ ಸರ್ಕಾರದಿಂದ ಹೊಸದಾಗಿ ಮಂಜೂರಿದೊರೆತಿರುವ ಮುರ್ಡೇಶ್ವರದಿಂದ ತಿರುಪತಿಗೆ ಸಂಪರ್ಕ ಕಲ್ಪಿಸುವ ವಿಶೇಷ ರೈಲು ಇಂದಿನಿಂದ ಪ್ರಾರಂಭವಾಗಿದ್ದು, ಇಂದು ಮದ್ಯಾಹ್ನ 3-30ಕ್ಕೆ ಮುರ್ಡೇಶ್ವರದಿಂದ ಹೊರಟು, ಭಟ್ಕಳ ರೇಲ್ವೆ ನಿಲ್ದಾಣದಲ್ಲಿ ಮಧ್ಯಹ್ನ3-42ಕ್ಕೆ ತಲುಪಲುಪಿದಾಗ, ಕೊಂಕಣ ರೈಲ್ವೇ ಹೋರಾಟ ಸಮಿತಿಯ ಸದಸ್ಯರಿಂದ ಮತ್ತು ಭಾರತೀಯ ಜನತಾ ಪಕ್ಷ ಭಟ್ಕಳ ಮಂಡಲದ ಪದಾಧಿಕಾರಿಗಳಿಂದ ಹಾಗೂ ಸಾರ್ವಜನಿಕರಿಂದ ಭಟ್ಕಳದ ರೈಲ್ವೆ ನಿಲ್ದಾಣದಲ್ಲಿ ಮುರ್ಡೇಶ್ವರದಿಂದ ತಿರುಪತಿಗೆ ಸಂಪರ್ಕ ಕಲ್ಪಿಸುವ ಈ ವಿಶೇಷ ರೈಲಿಗೆ ಸ್ವಾಗತ ಮಾಡಿ ಶುಭಾಷಯ ಕೋರಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಶ್ರೀಕಾಂತ್ ನಾಯ್ಕ್ ,ಭಟ್ಕಳ ಬಿಜೆಪಿ ಮಂಡಲದ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ನಾಯ್ಕ, ಕಾರ್ಯದರ್ಶಿ ಜಗದೀಶ ನಾಯ್ಕ, ಸಾಮಾಜಿಕ ಜಾಲತಾಣ ಸಂಚಾಲಕ ಪಾಂಡುರಂಗ ನಾಯ್ಕ, ಮುಟ್ಟಳ್ಳಿ ಪಂಚಾಯತ್ ಸದಸ್ಯ ಶೇಷು ನಾಯ್ಕ , ಕೊಂಕಣ ರೈಲ್ವೇ ಹೋರಾಟ ಸಮಿತಿಯ ಸದಸ್ಯರು, ಮತ್ತು ಭಾರತೀಯ ಜನತಾ ಪಕ್ಷ ಭಟ್ಕಳ ಮಂಡಲದ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.