ಅರಣ್ಯವಾಸಿಗಳ ಸಮಸ್ಯೆಗಳನ್ನ ಬಗೆಹರಿಸುವಲ್ಲಿ ಕಾಂಗ್ರೇಸ್ ಸರಕಾರ ಬದ್ಧವಾಗಿದೆ- ಸಚಿವ ಮಂಕಾಳ ವೈಧ್ಯ.
ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳನ್ನ ಬಗೆಹರಿಸುವಲ್ಲಿ ಕಾಂಗ್ರೇಸ್ ಸರಕಾರ ಬದ್ಧವಾಗಿದೆ ಅಲ್ಲದೇ, ಅರಣ್ಯ ಭೂಮಿ ಹಕ್ಕು ನೀಡುವಲ್ಲಿ ಸರಕಾರ ಗಂಭೀರವಾಗಿ ಪರಿಗಣಿಸುವುದು ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈಧ್ಯರು ಹೇಳಿದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಇಂದು ವಿಧಾನ ಸೌಧ ಬೆಂಗಳೂರಿನ ಸಚಿವರ ಕಾರ್ಯಾಲಯದಲ್ಲಿ ಭೇಟ್ಟಿಯಾಗಿ ಅರಣ್ಯವಾಸಿಗಳ ಸಮಸ್ಯೆಗಳ ಮನವಿಯನ್ನು ನೀಡಿದ ಸಂದರ್ಭದಲ್ಲಿ ಅವರು ಮೇಲಿನಂತೆ ಹೇಳಿದರು.
ಅರಣ್ಯ ಹಕ್ಕು ಕಾಯಿದೆ ಅನುಷ್ಟಾನದ ವೈಫಲ್ಯತೆಯಿಂದ ಜಿಲ್ಲೆಯಲ್ಲಿ ೬೯,೭೩೩ ಅರ್ಜಿ ತೀರಸ್ಕಾರದೊಂದಿಗೆ, ಶೇ. ೭೮.೨೦ ರಷ್ಟು ತೀರಸ್ಕಾರವಾಗಿದೆ ಎಂದು ಚರ್ಚೆಯ ಸಂಧರ್ಭದಲ್ಲಿ ರವೀಂದ್ರ ನಾಯ್ಕ ಹೇಳಿದರು.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಜಿಲ್ಲೆಯಲ್ಲಿ ಬುಡಕಟ್ಟು ೧೩೩೧, ಪಾರಂಪರಿಕ ಅರಣ್ಯವಾಸಿಗಳಿಗೆ ೩೯೮ ಹಾಗೂ ಸಮುದಾಯ ಉದ್ದೇಶಕ್ಕೆ ೧೧೨೬ ಒಟ್ಟೂ ೨೮೫೫ ಹೀಗೆ ಶೇಕಡವಾರು ಬಂದಿರುವAಥ ಗ್ರಾಮೀಣ ಭಾಗದ ಅರ್ಜಿಯಲ್ಲಿ ಶೇ. ೩.೨೦ ರಷ್ಟು ಮಾತ್ರ ಹಕ್ಕು ಪ್ರಾಪ್ತವಾಗಿದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಅರಣ್ಯವಾಸಿಗಳೊಂದಿಗೆ ಸಮಾಲೋಚನೆ:
ಜಿಲ್ಲೆಯ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು, ಅರಣ್ಯವಾಸಿಗಳೊಂದಿಗೆ ಮುಕ್ತ ಚರ್ಚೆ ಏರ್ಪಡಿಸಿ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಜರುಗಿಸಲು ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ಉಸ್ತುವಾರಿ ಸಚಿವರಾದ ಮಂಕಾಳ ವೈಧ್ಯ ಅವರು ಅಧ್ಯಕ್ಷ ರವಿಂದ್ರ ನಾಯ್ಕ ಅವರಿಗೆ ಆಶ್ವಾಸನೆ ನೀಡಿದರು.
ಈ ಸಂಧರ್ಭದಲ್ಲಿ ಸಹಕಾರಿ ಧುರೀಣ ವಿವೇಕ್ ಭಟ್ಟ ಗಡಿಹಿತ್ಲು ಉಪಸ್ಥಿತರಿದ್ದರು.