ಉಮೇಶ ಮುಂಡಳ್ಳಿ ಯವರಿಗೆ ಬೆಂಗಳೂರು ಕೃಷಿ ವಿವಿಯಲ್ಲಿ ನಟ ಲೋಕೇಶ್ ನೆನಪಿನ ಪ್ರಶಸ್ತಿ ಪ್ರಧಾನ
ಭಟ್ಕಳ- ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಅಲೂಮ್ನಿ ಅಸೋಸಿಯೇಷನ್ ಸಭಾಭವನದಲ್ಲಿ ರವಿವಾರ ನಡೆದ ಕನ್ನಡ ಕಲಾ ಸಮ್ಮೇಳನದಲ್ಲಿ ಜಿಲ್ಲೆಯ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ಅವರಿಗೆ ಕಲಾರತ್ನ ಲೋಕೇಶ್ ಸ್ಮರಣಾರ್ಥ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸಂಗೀತ ಕ್ಷೇತ್ರದಲ್ಲಿ ಮುಂಡಳ್ಳಿ ಅವರ ಸೇವೆಗೆ ಸಂದ ಗೌರವ ಇದಾಗಿದ್ದು. ವಿಶ್ವ ಕನ್ನಡ ಕಲಾ ಸಂಸ್ಥೆ ಬೆಂಗಳೂರು ಅವರು ಕಾರ್ಯಕ್ರಮ ಆಯೋಜಿಸಿದ್ದರು. ಕನ್ನಡ ಕಲಾ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಜೊತೆಯಲ್ಲಿ ಗಜಲ್ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಿರು ನಾಟಕ ಭರತನಾಟ್ಯ ಕಾರ್ಯಕ್ರಗಳು ಆಯೋಜನೆಗೊಂಡಿದ್ದವು. ಈ ಎಲ್ಲ ಕಾರ್ಯಕ್ರಮದಲ್ಲಿ ಕನ್ನಡ ಕಲಾ ಸಮ್ಮೇಳನದ ಸರ್ವಾಧ್ಯಕ್ಷ ಕನ್ನಡ ಕುವರ ಅಶೋಕ ಕುಮಾರ್, ಹಿರಿಯ ಚಿತ್ರನಟಿ ಗಿರಿಜಾ ಲೋಕೇಶ್, ಹಿರಿಯ ಕವಿಗಳಾದ ಕಾ.ವೆಂ.ಶ್ರೀನಿವಾಸಮೂರ್ತಿ, ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ವಿ.ತ್ಯಾಗರಾಜು , ಕೃಷಿ ವಿವಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಎಚ್ ಹರೀಶ್ ಹಾಗೂ ಸಂಸ್ಥೆಯ ಅಧ್ಯಕ್ಷ ಡಾ.ಈ ರವೀಶ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.