ಕುಮಟ : ಕರ್ನಾಟಕ ಸರ್ಕಾರ, ಜಲಾನಯನ ಅಭಿವೃದ್ಧಿ, ತೋಟಗಾರಿಕಾ ಇಲಾಖೆ, ಹಾಗೂ ಸ್ಕೊಡವೇಸ್ ಸಂಸ್ಥೆಯ ಸಹಯೋಗದಲ್ಲಿ ರಚಿತವಾದ ಮಿರ್ಜಾನನಲ್ಲಿರುವ ನಿಸರ್ಗದಾರಿ ರೈತ ಉತ್ಪಾದಕ ಕಂಪನಿಯಿಂದ ಇಲ್ಲಿನ
ಸಂಡಳ್ಳಿಯ ಯತೀಶ್ ಭಾಗವತ್ ಅವರ ತೋಟದಲ್ಲಿ
ತೋಟಗಾರಿಕಾ ಬೆಳೆಗಳ ನಿರ್ವಹಣೆಯ ಕುರಿತು ಕೃಷಿಕರಿಗೆ ಮಾಹಿತಿ ಹಾಗೂ ತರಬೇತಿಯನ್ನು ನೀಡಲಾಯಿತು.
ಬೆಂಗಳೂರಿನ ಜಿಯೋವೇದಿಕ್ ಆರ್ಗಾನಿಕ್ ಸಂಸ್ಥೆಯ ವಿಜ್ಞಾನಿ ಡಾ.ಮಂಜುನಾಥ ಅವರು ಎಲೆಚುಕ್ಕಿರೋಗ ಕೊಳೆರೋಗ, ಸುಳಿಕೊಳೆ, ಬೇರು ತಂತು ರೋಗ,ಮತ್ತು ಸಮಗ್ರ ತೋಟಗಾರಿಕಾ ಬೆಳೆಗಳ ನಿರ್ವಹಣೆಯ ಕುರಿತು ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ರೈತರು ಬೆಳೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಕೇಳಿ ಡಾ.ಮಂಜುನಾಥ ಅವರಿಂದ ಸಮರ್ಪಕ ಮಾಹಿತಿ ಪಡೆದುಕೊಂಡರು. ನಿಸರ್ಗದಾರಿ ರೈತ ಉತ್ಪಾದಕ ಕಂಪನಿಯ ನಿರ್ದೇಶಕ ರಾಜೀವ್ ಭಟ್, ಸ್ಕೊಡವೆಸ್ ನ ರೈತ ಉತ್ಪಾದಕ ಕಂಪನಿಯ ಯೋಜನಾ ಅಧಿಕಾರಿ ಪ್ರಶಾಂತ ನಾಯಕ್, ಫೀಲ್ಡ ಆಫೀಸರ್ ಉಮೇಶ ಮರಾಠಿ, ಕೃಷಿಕರಾದ ಶ್ರೀಧರ ಹೆಗಡೆ, ಭೈರವೇಶ್ವರ ಭಾಗವತ, ಸುಬ್ರಮಣ್ಯ ಹೆಗಡೆ, ಉದಯ ಜೈನ್ ನಿಸರ್ಗದಾರಿ ಎಫ್.ಪಿ.ಓ. ನ ಸಿ.ಇ.ಒ.ಮಂಜುನಾಥ ಮರಾಠಿ ಮುಂತಾದವರು ಉಪಸ್ಥಿತರಿದ್ದರು.