• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Friday, August 7, 2026
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಭಟ್ಕಳದಲ್ಲಿ ನಟ ಚೇತನ ಅಹಿಂಸಾ: ಹೊಸ ರಾಜಕೀಯ ಪಕ್ಷದ ಘೋಷಣೆ, ಭ್ರಷ್ಟಾಚಾರ ಹಾಗೂ ಪರಿಸರ ವಿಚಾರಕ್ಕೆ ಆದ್ಯತೆ

Kannada News Desk by Kannada News Desk
August 7, 2026
in ನಮ್ಮ ಕರಾವಳಿ
0
ಭಟ್ಕಳದಲ್ಲಿ ನಟ ಚೇತನ ಅಹಿಂಸಾ: ಹೊಸ ರಾಜಕೀಯ ಪಕ್ಷದ ಘೋಷಣೆ, ಭ್ರಷ್ಟಾಚಾರ ಹಾಗೂ ಪರಿಸರ ವಿಚಾರಕ್ಕೆ ಆದ್ಯತೆ
0
SHARES
409
VIEWS
WhatsappTelegram Share on FacebookShare on TwitterLinkedin

ಭಟ್ಕಳ: ಸಾಮಾಜಿಕ ಹೋರಾಟಗಾರ ಹಾಗೂ ಚಿತ್ರನಟ ಚೇತನ ಅಹಿಂಸಾ ಅವರು ಭಟ್ಕಳ ಪ್ರವಾಸದ ವೇಳೆ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಉದ್ದೇಶವನ್ನು ಪ್ರಕಟಿಸಿದರು. ರಾಜ್ಯದ ಆಡಳಿತ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಶೋಷಿತ ಮತ್ತು ಅಂಚಿನ ಸಮುದಾಯಗಳ ಧ್ವನಿಯನ್ನು ಮುಖ್ಯವಾಹಿನಿಗೆ ತರುವ ಗುರಿಯೊಂದಿಗೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದರು.


ರಾಜ್ಯದ ವಿವಿಧ ಭಾಗಗಳಲ್ಲಿ ಜನರೊಂದಿಗೆ ನೇರ ಸಂವಾದ ನಡೆಸಿ, ಅವರ ಮೂಲಭೂತ ಸಮಸ್ಯೆಗಳನ್ನು ಅರಿತುಕೊಂಡು ಅವುಗಳ ಪರಿಹಾರಕ್ಕಾಗಿ ರಾಜ್ಯವ್ಯಾಪಿ ಜನಾಂದೋಲನ ರೂಪಿಸುವ ಯೋಜನೆ ಇದೆ ಎಂದು ಅವರು ಹೇಳಿದರು. ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ನಡೆಸುವುದು ತಮ್ಮ ರಾಜಕೀಯ ಚಟುವಟಿಕೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿರಲಿದೆ ಎಂದರು.


ಭಟ್ಕಳ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು ಚೇತನ ಅವರನ್ನು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ಮಾದೇವ ಬಾಕಡ್, ವೆಂಕಟೇಶ್, ಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ವೇಳೆ ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡಿದ ಚೇತನ, ಅಭಿವೃದ್ಧಿಯ ಹೆಸರಿನಲ್ಲಿ ಬಂಡವಾಳಶಾಹಿಗಳಿಗೆ ಅನುಕೂಲವಾಗುವ ಯೋಜನೆಗಳನ್ನು ಸರ್ಕಾರ ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದರು. ಪರಿಸರಕ್ಕೆ ಹಾನಿ ಉಂಟುಮಾಡುವ ಯಾವುದೇ ಯೋಜನೆಗಳಿಗೆ ಅವಕಾಶ ನೀಡಬಾರದು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು.


ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತು ಪ್ರತಿಕ್ರಿಯಿಸಿದ ಅವರು, ಸಾವಿರಾರು ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಿಂದ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದರು. ಇದಕ್ಕೆ ಪರ್ಯಾಯವಾಗಿ ಸೌರಶಕ್ತಿ ಸೇರಿದಂತೆ ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನಾ ವಿಧಾನಗಳಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಈ ವಿಷಯವಾಗಿ ಸುಮಾರು 30 ಪರಿಸರವಾದಿಗಳ ನಿಯೋಗದೊಂದಿಗೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಲಾಗುವುದು ಎಂದರು.
ರಾಜಕೀಯ ವಿಚಾರಗಳ ಕುರಿತು ಮಾತನಾಡಿದ ಅವರು, ಅಂಡಮಾನ್‌ನಲ್ಲಿ ಇದೇ ರೀತಿಯ ಯೋಜನೆಗಳನ್ನು ವಿರೋಧಿಸುವ ನಾಯಕರು ರಾಜ್ಯದಲ್ಲಿ ಇಂತಹ ಯೋಜನೆಗಳಿಗೆ ಬೆಂಬಲ ನೀಡುತ್ತಿರುವುದು ವೈಪರೀತ್ಯವಾಗಿದೆ ಎಂದು ಟೀಕಿಸಿದರು. ಟೊಂಕಾ ಬಂದರು ಯೋಜನೆ ಸಂಬಂಧ ಕಾಂಗ್ರೆಸ್ ನಾಯಕರು ಈ ಹಿಂದೆ ನೀಡಿದ್ದ ಭರವಸೆಗಳು ಈಡೇರಿಲ್ಲ ಎಂಬ ಆರೋಪವನ್ನೂ ಮಾಡಿದರು.


ಕಾವೇರಿ ನೀರಿನ ಹಂಚಿಕೆ ಕುರಿತು ಪ್ರತಿಕ್ರಿಯಿಸಿದ ಚೇತನ, ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ವೈಮನಸ್ಸು ಹೆಚ್ಚದಂತೆ ಉಭಯ ರಾಜ್ಯಗಳ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕು ಎಂದು ಸಲಹೆ ನೀಡಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಕರಾವಳಿ ಭಾಗ ಹಾಗೂ ಮಹಿಳೆಯರಿಗೆ ಸಮರ್ಪಕ ಪ್ರಾತಿನಿಧ್ಯ ದೊರೆತಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಮುಂಬರುವ ದಿನಗಳಲ್ಲಿ “ಪರಿವರ್ತನಾ ಪರಿಸರವಾದ” ಸಿದ್ಧಾಂತವನ್ನು ಆಧಾರವಾಗಿಟ್ಟುಕೊಂಡು ಹೊಸ ರಾಜಕೀಯ ಮಾದರಿಯನ್ನು ರೂಪಿಸುವ ಉದ್ದೇಶ ಹೊಂದಿರುವುದಾಗಿ ಇದೇ ಸಂದರ್ಭದಲ್ಲಿ ಘೋಷಿಸಿದರು.

Share this:

  • Share on WhatsApp (Opens in new window) WhatsApp
  • Share on Telegram (Opens in new window) Telegram
  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Previous Post

ಏಷ್ಯಾ ಪೆಸಿಫಿಕ್ ಯೋಗ ಸ್ಪರ್ಧೆಗೆ ಆಯ್ಕೆಯಾದ ನಂದನ್ ಭಟ್‌ಗೆ ಅನಂತಮೂರ್ತಿ ಹೆಗಡೆರಿಂದ ವೈಯಕ್ತಿಕ ನೆರವು

Kannada News Desk

Kannada News Desk

Please login to join discussion

ಕ್ಯಾಲೆಂಡರ್

August 2026
MTWTFSS
 12
3456789
10111213141516
17181920212223
24252627282930
31 
« Jul    

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

%d