ಅಂಕೋಲಾ ಘಟಕದ ಕರ್ತವ್ಯ ನಿರತ ಚಾಲಕನ ಅಕಾಲಿಕ ಮರಣ.. ಕಂಬನಿ ಮಿಡಿದ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು.
ಅಂಕೋಲಾ : ಕಳೆದ 17 ವರ್ಷಗಳಿಂದ ಅಂಕೋಲಾ ಘಟಕದಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗಪ್ಪ ಎಚ್ ಸತ್ಯಮನವರ್ ಎಂದಿನಂತೆ ಅಂಕೋಲಾ ದಿಂದ ಕಾರವಾರ ಮಾರ್ಗವಾಗಿ ವಿಜಯಪುರಕ್ಕೆ ತಲುಪಿದ್ದರು…
ವಿಜಯಪುರ ಬಸ್ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ತೆರಳಿದ ಸಂದರ್ಭದಲ್ಲಿ ಅಧಿಕ ರಕ್ತದೊತ್ತಡದಿಂದ ಮೂರ್ಛೆ ಬಿದ್ದಿದ್ದರು.. ಇದನ್ನು ಗಮನಿಸಿದ ಅಲ್ಲಿಯ ಸಿಬ್ಬಂದಿಗಳು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯಲ್ಲಿರುವ ಕಿಮ್ಸ್ ಗೆ ದಾಖಲಿಸಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ನಾಗಪ್ಪ ಎಚ್ ಸತ್ಯಮನವರ್ ನಿನ್ನೆ ರಾತ್ರಿ ದಿನಾಂಕ 30/01/2024 ರಂದು ಹುಬ್ಬಳ್ಳಿಯಲ್ಲಿ ಮೃತಪಟ್ಟಿದ್ದಾರೆ.
ಅಂಕೋಲದ ಸಾರಿಗೆ ಘಟಕದಲ್ಲಿ 17 ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ನಾಗಪ್ಪ ಎಚ್ ಸತ್ಯಮನವರ್ ಅಪಾರ ಗೆಳೆಯರ ಬಳಗವನ್ನು ಹೊಂದಿದ್ದರು ಇವರ ಅಕಾಲಿಕ ನಿಧನಕ್ಕೆ ಅಂಕೋಲ ಘಟಕದ ಎಲ್ಲಾ ಸಾರಿಗೆ ಸಿಬ್ಬಂದಿಗಳು ಮರುಗಿ ಕಂಬನಿಯನ್ನು ಮಿಡಿದಿದ್ದಾರೆ,
ಒಳ್ಳೆಯ ನಡತೆ, ಶಿಸ್ತು ಬದ್ಧ ಜೀವನ. ಕರ್ತವ್ಯದ ಹಾಜರಾತಿಯಲ್ಲೂ ಸಹಿ ಎನಿಸಿಕೊಂಡಿದ್ದ. ಯಾವಾಗಲೂ ಲವಲವಿಕೆ ನಗುಮುಖದಿಂದ ಇರುತ್ತಿದ್ದ. ಸತ್ಯ ಎಂದೇ ಅಂಕೋಲಾದ ಜನತೆಗೆ ಚಿರಪರಿಚಿತನಾಗಿದ್ದ ಚಾಲಕ ಸತ್ಯಮ್ಮನವರ್ ಆತ್ಮಕ್ಕೆ ಶಾಂತಿ ಸಿಗಲೆಂದು ಅಂಕೋಲಾದ ಘಟಕ ವ್ಯವಸ್ಥಾಪಕಿ ಚೈತನ್ಯ ಅಗಳಗಟ್ಟಿಯವರು ಸಂತಾಪವನ್ನು ಸೂಚಿಸಿದ್ದಾರೆ.