28ರ ಯುವಕನೊಂದಿಗೆ 46ರ ಆಂಟಿಯ ಲವ್ – ತನ್ನ ಪ್ರೀತಿಗೆ ಅಡ್ಡಿಯಾದ ಪತಿಯನ್ನು ಪ್ರಿಯತಮನ ಜೊತೆ ಸೇರಿ ಕೊಲೆ
ಬೆಂಗಳೂರು-ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರೀತಿಗೆ ಅಡ್ಡಿಯಾಗಿದ್ದ ಪತಿಯನ್ನು ಮುದ್ದಿನ ಮಡದಿಯೇ (wife) ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವ ಘಟನೆ ನಡೆದಿದೆ.
ರಾಕೇಶ್ ತೋಮಂಗ ಕೊಲೆಯಾದ ದುರ್ದೈವಿ. ದೇವಿ ತೋಮಾಂಗ್ (46) ಮತ್ತು ಆಕೆಯ ಪ್ರಿಯಕರ ಅಸ್ಸಾಂ ಮೂಲದ ಜೈನುಲ್ ಅಲಿ ಬಾಬು (28) ಬಂಧಿತರು. ಆರೋಪಿಗಳು ನ.6ರಂದು ವಡೇರಹಳ್ಳಿಯಲ್ಲಿ (Vaderahalli) ರಾಕೇಶ್ ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು.
ದೇಬಿತಂಬಾಗ್ ಹಾಗೂ ಬಾಬು ಅಲಿ ನಡುವೆ ಅಕ್ರಮ ಸಂಬಂಧವಿತ್ತು. ತಮ್ಮ ಅಕ್ರಮ ಸಂಬಂಧಕ್ಕೆ ಪತಿಯು ಅಡ್ಡಿಯಾಗುತ್ತಾನೆ ಎಂದು ಇಬ್ಬರೂ ಸೇರಿ ಕೊಲೆ ಮಾಡುವ ಸಂಚು ರೂಪಿಸಿದ್ದರು. ಅದರಂತೆ ಪ್ರಿಯಕರನೊಂದಿಗೆ ಸೇರಿ ನವೆಂಬರ್ 6ರಂದು ವಿದ್ಯಾರಣ್ಯಪುರದ ವಡೇರಹಳ್ಳಿಯಲ್ಲಿ ರಾಕೇಶನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.
ನಂತರ ತನಗೇನು ಗೊತ್ತಿಲ್ಲವೆಂಬಂತೆ ಇದ್ದ ದೇವಿ ಪೊಲೀಸರ ಎದುರು ನಾಟಕವಾಡಿದ್ದಾಳೆ. ಆದರೆ, ತನಿಖೆಗಿಳಿದ ವಿದ್ಯಾರಣ್ಯಪುರ ಪೊಲೀಸರು, ಕೊಲೆಯ ರಹಸ್ಯವನ್ನು ಬಯಲಿಗೆಳೆದಿದ್ದಾರೆ. ದೇವಿ ಹಾಗೂ ಪ್ರಿಯಕರನನ್ನು (lover) ಪೊಲೀಸರು ಬಂಧಿಸಿದ್ದಾರೆ.